Sunday, 15th December 2024

ಕಾರು ಬಾಂಬ್ ಸ್ಪೋಟ: ಎಂಟು ಸಾವು, 47 ಮಂದಿಗೆ ಗಾಯ

ಕಾಬೂಲ್ : ಕಾರು ಬಾಂಬ್ ಸ್ಪೋಟಗೊಂಡು 8 ಮಂದಿ ಮೃತಪಟ್ಟು, 47 ಮಂದಿ ಗಾಯಗೊಂಡಿದ್ದಾರೆ. ಅಪ್ಘಾನಿಸ್ತಾನ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಘಟನೆ ಸಂಭವಿಸಿದೆ.

ಶುಕ್ರವಾರ ರಾತ್ರಿ ಈ ಕಾರು ಬಾಂಬ್ ಸ್ಪೋಟ ಸಂಭವಿಸಿದ್ದು, ಸ್ಪೋಟದಲ್ಲಿ 14 ಮನೆಗಳು ನಾಶವಾಗಿದೆ. ಗಾಯಗೊಂಡಿರುವ ಹಲವು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಕಾರು ಬಾಂಬ್ ಸ್ಪೋಟದ ದಾಳಿಯನ್ನು ಯಾವುದೇ ಸಂಘಟನೆ ಸ್ಪೋಟದ ಹೊಣೆ ಹೊತ್ತುಕೊಂಡಿಲ್ಲ. ದಾಳಿಯನ್ನು

ವಿಶ್ವಸಂಸ್ಥೆ ಖಂಡಿಸಿದ್ದು, ಪ್ರಮುಖವಾಗಿ ಮಹಿಳೆಯರು, ಮಾನ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವವರು ಜನಾಂಗೀಯ ಮತ್ತು ಧಾರ್ಮಿಕ ಅಲ್ಪಾಸಂಖ್ಯಾತರನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದೆ.