Sunday, 15th December 2024

ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆಯಲು ಹೆಣ್ಣುಮಕ್ಕಳಿಗೆ ನಿಷೇಧ

ಕಾಬೂಲ್: ತಾಲಿಬಾನ್ ಮುಂದಿನ ತಿಂಗಳು ನಡೆಯಲಿರುವ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆಯಲು ಹೆಣ್ಣುಮಕ್ಕಳನ್ನು ನಿಷೇಧಿಸಿದೆ.

ತಾಲಿಬಾನ್ ಉನ್ನತ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾಲಯಗಳಿಗೆ ನೋಟಿಸ್ ಕಳುಹಿಸಿದ್ದು, ಮುಂದಿನ ಸೂಚನೆ ಬರುವವರೆಗೂ ವಿದ್ಯಾರ್ಥಿನಿ ಯರು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹೇಳಿದೆ. ಸ್ಪಷ್ಟವಾಗಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಹೆಣ್ಣುಮಕ್ಕಳನ್ನಿ ನೋಂದಾಯಿ ಸಿಕೊಳ್ಳುವುದನ್ನು ನಿಷೇಧಿಸಿದ್ದಾರೆ.

ಸರ್ಕಾರೇತರ ಸಂಸ್ಥೆಗಳಲ್ಲಿ ಮಹಿಳೆಯರು ಕೆಲಸ ಮಾಡುವುದನ್ನು ನಿಷೇಧಿಸುವ ಬೆನ್ನಲ್ಲೇ ಮತ್ತೊಂದು ನಿಷೇಧ ಹೇರಿದೆ. ತಾಲಿಬಾನ್‌ ನಿರ್ಧಾರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಅಫ್ಘಾನ್ ಹುಡುಗಿಯರಿಗೆ ವಿಶ್ವವಿದ್ಯಾಲಯ ಶಿಕ್ಷಣದ ಮೇಲೆ ಅನಿರ್ದಿಷ್ಟ ನಿಷೇಧವನ್ನು ತಾಲಿಬಾನ್ ಆದೇಶಿಸಿದ ನಂತರ, ಎಜುಕೇಶನ್ ಕ್ಯಾನಾಟ್ ವೇಟ್ (ECW), ವಿಶ್ವಸಂಸ್ಥೆಯು ಜಾಗತಿಕ ಮತ್ತು ತುರ್ತು ಸಂದರ್ಭಗಳಲ್ಲಿ ಶಿಕ್ಷಣಕ್ಕಾಗಿ ಶತಕೋಟಿ ಡಾಲರ್ ನಿಧಿ ಮತ್ತು ದೀರ್ಘಕಾಲದ ಬಿಕ್ಕಟ್ಟು ಗಳು ಸೇರಿದಂತೆ ಹಲವಾರು ಮಾನವೀಯ ಸಂಸ್ಥೆಗಳು ತಡೆ ನೀಡಿವೆ. ಆಫ್ಘನ್ ಮಹಿಳೆಯರ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಅಮಾನತುಗೊಳಿ ಸುವ ನಿರ್ಧಾರವನ್ನು ಹಿಂಪಡೆಯಿರಿ ಎಂದು ತಾಕೀತು ಮಾಡಿದೆ.

ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್ ಈ ತಿಂಗಳ ಆರಂಭದಲ್ಲಿ ಸಭೆ ನಡೆಸಿದ್ದು, ಅಫ್ಘಾನ್ ಉಸ್ತುವಾರಿ ಸರ್ಕಾರದ ನಿರ್ಧಾರವನ್ನು ಚರ್ಚಿಸಲು ಮಹಿಳೆಯರಿಗೆ ಶಿಕ್ಷಣ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಲು ಪ್ರವೇಶವನ್ನು ನಿರ್ಬಂಧಿಸಿದೆ.