Saturday, 4th January 2025

America Shootout: ಅಮೆರಿಕದಲ್ಲಿ ಮತ್ತೊಂದು ಡೆಡ್ಲಿ ಅಟ್ಯಾಕ್‌! ನ್ಯೂಯಾರ್ಕ್‌ನ ಕ್ಲಬ್‌ನಲ್ಲಿ ಗುಂಡಿನ ಮಳೆ- ಶಾಕಿಂಗ್‌ ವಿಡಿಯೊ ಇದೆ

America Horror

ವಾಷಿಂಗ್ಟನ್‌: ಹೊಸ ವರ್ಷದ ಸಂಭ್ರಮದಲ್ಲಿದ್ದ ಅಮೆರಿಕಗೆ (America) ಎರಡೆರಡು ಶಾಕ್‌ ಎದುರಾಗಿದೆ. ಬೌರ್ಬನ್ ಸ್ಟ್ರೀಟ್‌ (New Orleans) ದಾಳಿಯ ನಂತರ ನ್ಯೂಯಾರ್ಕ್ (New york) ನಗರದ ಕ್ವೀನ್ಸ್ ಕೌಂಟಿಯಲ್ಲಿರುವ ಅಮಾಜುರಾ ನೈಟ್‌ಕ್ಲಬ್‌ನಲ್ಲಿ ಬುಧವಾರ ರಾತ್ರಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ದಾಳಿಯಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಕೂಡಲೇ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ(America Shootout).

ಸದ್ಯ ದಾಳಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನ್ಯೂಯಾರ್ಕ್ ಪೊಲೀಸ್ ಇಲಾಖೆ ಘಟನೆಯ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ನೀಡಿಲ್ಲ.

ರಾತ್ರಿ 11:45 ರ ಸುಮಾರಿಗೆ  ಗುಂಡಿನ ದಾಳಿ ಸಂಭವಿಸಿದ್ದು, ದಾಳಿಯಲ್ಲಿ ಇಬ್ಬರು ಭಾಗಿಯಾಗಿರುವ ಶಂಕೆ ಇದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಲಾಂಗ್ ಐಲ್ಯಾಂಡ್ ಯಹೂದಿ ಆಸ್ಪತ್ರೆ ಮತ್ತು ಕೋಹೆನ್ ಚಿಲ್ಡ್ರನ್ಸ್ ಮೆಡಿಕಲ್ ಸೆಂಟರ್ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.

24 ಗಂಟೆಗಳ ಅವಧಿಯಲ್ಲಿ ಅಮೆರಿಕದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.  ಅಮೆರಿಕದ (America) ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮದಲ್ಲಿದ್ದವರ ಮೇಲೆ ಉದ್ದೇಶಪೂರ್ವಕವಾಗಿ ಚಾಲಕನೊಬ್ಬ ಟ್ರಕ್‌ ಹರಿಸಿದ ಪರಿಣಾಮ 15 ಜನರು ಮೃತಪಟ್ಟಿದ್ದರು. ಶಂಕಿತ ಆರೋಪಿಯನ್ನು ಅಮೆರಿಕ ಪ್ರಜೆ ಶಮ್ಸುದ್-ದಿನ್ ಜಬ್ಬಾರ್ ಎಂದು ಗುರುತಿಸಲಾಗಿದ್ದು, ಆತ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಎನ್ನಲಾಗಿದೆ. , ಆತ ಟೆಕ್ಸಾಸ್‌ನ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿಂದೆ ಆತ ಅಮೆರಿಕದ ಮಿಲಿಟರಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Tahawwur Rana : ʻಭಾರತಕ್ಕೆ ಹಸ್ತಾಂತರ ಬೇಡವೆಂದು ಅಮೆರಿಕಾ ಸುಪ್ರೀಂಗೆ ಮೊರೆ ಹೋದ ಮುಂಬೈ ದಾಳಿ ಆರೋಪಿ ತಹವ್ವುರ್​ ರಾಣಾ!