ನ್ಯೂಯಾರ್ಕ್: ಅಮೇರಿಕನ್ ಮೂಲದ ನಟ, ನಿರ್ಮಾಪಕ ರೇ ಲಿಯೊಟ್ಟಾ (67 ವರ್ಷ) ನಿಧನರಾಗಿದ್ದಾರೆ.
ಗ್ಯಾಂಗ್ಸ್ಟರ್ ಬಯೋಪಿಕ್ ಆಗಿದ್ದ ‘ಗುಡ್ಫೆಲಾಸ್’ ನಲ್ಲಿ ‘ಹೆನ್ರಿ ಹಿಲ್’ ಪಾತ್ರದ ಮೂಲಕ ಲಿಯೊಟ್ಟಾ ಅಪಾರ ಜನಪ್ರಿಯತೆ ಸಂಪಾದಿಸಿದ್ದರು.
‘ಲಿಯೋಟ್ಟಾ ಅವರು ಡೊಮಿನಿಕನ್ ರಿಪಬ್ಲಿಕ್ನಲ್ಲಿ ನಡೆಯುತ್ತಿರುವ ಡೇಂಜ ರಸ್ ವಾಟರ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಯಾಗಿದ್ದರು. ನಿದ್ರೆ ಮಾಡುತ್ತಿರುವಾಗ ನಿಧನರಾಗಿದ್ದಾರೆ’ ಎಂದು ತಿಳಿಸಲಾಗಿದೆ. ಲಿಯೊಟ್ಟಾ ಪುತ್ರಿ ಹಾಗೂ ಕುಟುಂಬವನ್ನು ಅಗಲಿದ್ದಾರೆ.
1954ರ ಡಿಸೆಂಬರ್ 18ರಂದು ನ್ಯೂಯಾರ್ಕ್ನಲ್ಲಿ ಜನಿಸಿದ್ದ ಲಿಯೊಟ್ಟಾ ಅವರನ್ನು ಅನಾಥಾಶ್ರಮಕ್ಕೆ ಸೇರಿಸಲಾಗಿತ್ತು. ನಂತರ 6 ತಿಂಗಳಿದ್ದಾಗ ದಂಪತಿಯೋರ್ವರು ಲಿಯೊಟ್ಟಾರನ್ನು ದತ್ತು ಪಡೆದಿ ದ್ದರು.
ತಮ್ಮ ಮೂಲ ಪೋಷಕ ರನ್ನು ಪತ್ತೆಹಚ್ಚಲು ಮುಂದಾಗಿದ್ದ ನಟ, ಕೊನೆಗೂ ತಮ್ಮ ಮೂಲ ಪೋಷಕರು ಸ್ಕಾಟ್ಲಾಂಡ್ನವರು ಎಂಬುದನ್ನು ಕಂಡುಕೊಂಡಿದ್ದರು. 1983ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ನಟ ಸಕ್ರಿಯರಾಗಿ ನಟಿಸುತ್ತಿದ್ದರು.