Thursday, 12th December 2024

ದೊಡ್ಡ ಕೆರೆಗೆ ಉರುಳಿದ ಬಸ್ಸು​,17 ಜನರ ಸಾವು, 35 ಮಂದಿಗೆ ಗಾಯ

ಢಾಕಾ: ನೈಋತ್ಯ ಬಾಂಗ್ಲಾದೇಶದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಕೆರೆಗೆ ಉರುಳಿದೆ.

ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿ, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

60ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್​, ಭಂ ಡಾರಿಯಾ ಉಪಜಿಲ್ಲೆಯಿಂದ ನೈಋತ್ಯ ವಿಭಾಗೀಯ ಕೇಂದ್ರ ಕಚೇರಿಯ ಬಾರಿಶಾಲ್‌ಗೆ ತೆರಳುತ್ತಿದ್ದಾಗ ಝಳಕತಿ ಜಿಲ್ಲೆ ಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿರೋಜ್‌ಪುರದ ಭಂಡಾರಿಯಾದಿಂದ ಹೊರಟ ಬಸ್​ 10:00 ಗಂಟೆ ಸುಮಾರಿಗೆ ಬಾರಿಶಾಲ್-ಖುಲ್ನಾ ಹೆದ್ದಾರಿಯಲ್ಲಿರುವ ಛತ್ರಕಾಂಡದ ರಸ್ತೆ ಬದಿಯ ದೊಡ್ಡ ಕೊಳಕ್ಕೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಮುಳುಗುತಜ್ಞರು ಮೃತದೇಹ ಗಳನ್ನು ಹೊರ ತೆಗೆದಿದ್ದಾರೆ. 17 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಬಾರಿಶಾಲ್ ವಿಭಾಗೀಯ ಆಯುಕ್ತ ಎಂಡಿ ಶೌಕತ್ ಅಲಿ ದೃಢಪಡಿಸಿದ್ದಾರೆ.

ಬಸ್ಸಿನೊಳಗೆ 65 ಪ್ರಯಾಣಿಕರಿದ್ದರು ಎಂದು ಅಂದಾಜಿಸಲಾಗಿದೆ. ಮೃತರಲ್ಲಿ ಎಂಟು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಇಪ್ಪತ್ತು ಪ್ರಯಾಣಿಕರು ಜಲಕತ್ತಿಯ ಮುಖ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮೃತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮೃತರಲ್ಲಿ ಹೆಚ್ಚಿನವರು ಪಿರೋಜ್‌ ಪುರದ ಭಂಡಾರಿಯಾ ಉಪಜಿಲ್ಲಾ ಮತ್ತು ಝಳಕತಿಯ ರಾಜಾಪುರ ಪ್ರದೇಶದ ನಿವಾಸಿಗಳಾಗಿದ್ದಾರೆ.

ಜೂನ್‌ನಲ್ಲಿ ಒಟ್ಟು 559 ರಸ್ತೆ ಅಪಘಾತಗಳು ಸಂಭವಿಸಿವೆ