Sunday, 15th December 2024

ನಿದ್ರೆಗೆ ಜಾರಿದ ಚಾಲಕ: ಬಸ್‌ ಕಂದಕಕ್ಕೆ ಉರುಳಿ 27 ಮಂದಿ ಸಾವು

ಲಿಮಾ : ಬಸ್ ಚಾಲನೆಯ ವೇಳೆಯಲ್ಲಿಯೇ ನಿದ್ರೆಗೆ ಚಾಲಕ ಜಾರಿದ ಕಾರಣ, ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದು ಅದರಲ್ಲಿದ್ದ 27ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಕ್ಷಿಣ ಪೆರುವಿ ನಲ್ಲಿ ಘಟನೆ ಸಂಭವಿಸಿದೆ.

ದಕ್ಷಿಣ ಪೆರು ವಿಯನ್ ಪ್ರದೇಶದ ಅಯಾಕುಚೋದ ಬಳಿ ವಾರಿ ಪಲೋಮಿನೋ ಕಂಪನಿಯ ಗಣಿ ಕೆಲಸಗಾರರು ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭ ಚಾಲಕ ನಿದ್ರೆಗೆ ಜಾರಿದ್ದಾನೆ. ಇದರಿಂದಾಗಿ ಘಟನೆ ಸಂಭವಿಸಿದೆ.

ರಕ್ಷಣಾ ತಂಡದ ಸಿಬ್ಬಂದಿಗಳು, ಕಂದಕಕ್ಕೆ ಉರುಳಿ ಬಿದ್ದು, ಮೃತದೇಹ, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.