Thursday, 12th December 2024

ಬಸ್ ಉರುಳಿ ಬಿದ್ದು ಏಳು ಮಂದಿ ಸಾವು, 20 ಮಂದಿಗೆ ಗಾಯ

ಕೊಲಂಬೋ : ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಶನಿವಾರ ಬಸ್ ಉರುಳಿ ಬಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ.

ಪಸಾರಾ ಪ್ರದೇಶದಲ್ಲಿ ಲುನುಗಲಾದಿಂದ ಕೊಲಂಬೊಗೆ ತೆರಳುತ್ತಿದ್ದ ಖಾಸಗಿ ಬಸ್, ಬಾದುಲ್ಲಾ ಮೊನರಗಾಳ ರಸ್ತೆಯ 13 ಮೈಲಿಯ ಪೋಸ್ಟ್ ಬಳಿ ಉರುಳಿ ಬಿದ್ದು, 200 ಅಡಿ ವರೆಗೆ ಜಾರಿಕೊಂಡು ಹೋಗಿರುವುದಾಗಿ ವರದಿಯಾಗಿದೆ.

ಕಂದಕಕ್ಕೆ ಉರುಳಿ ಬಿದ್ದಿದ್ದರಿಂದಾಗಿ ಬಸ್ ನಲ್ಲಿದ್ದ 7ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟರೆ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily