ಒಟ್ಟಾವ (ಕೆನಡಾ): ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು, ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ₹7447.10 ಕೋಟಿ ನೆರವು ನೀಡಲು ಸಿದ್ಧವಿರುವುದಾಗಿ ಪ್ರಕಟಿಸಿದ್ದಾರೆ.
‘ನಾವು ಕೆನಡಿಯನ್ ರೆಡ್ ಕ್ರಾಸ್ ಸಂಸ್ಥೆ ಮೂಲಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಈಗ ₹7447.10 ಕೋಟಿ ಹಣವನ್ನು ನೀಡಲು ಸಿದ್ಧರಿದ್ದೇವೆ. ಈ ಹಣ ಆಂಬುಲೆನ್ಸ್ ಸೇವೆಗಳು ಮತ್ತು ಸ್ಥಳೀಯವಾಗಿ ಪಿಪಿಇ ಕಿಟ್ ಖರೀದಿ ಸೇರಿದಂತೆ ಎಲ್ಲ ರೀತಿಯ ವೆಚ್ಚ ಗಳಿಗೂ ನೆರವಾಗುತ್ತದೆ’ ಎಂದು ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಮಾರ್ಕ್ ಗರ್ನೇವು ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸ ಲಿದ್ದಾರೆ’ ಎಂದು ಹೇಳಿದರು.