Saturday, 12th October 2024

ಎಲ್ಲಾ ಅಫ್ಘಾನ್‌ ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ: ಸ್ಪೇನ್‌ನ ರಕ್ಷಣಾ ಸಚಿವೆ ರೋಬಲ್ಸ್‌

ಸ್ಪೇನ್‌: ಅಫ್ಘಾನಿಸ್ತಾನದಲ್ಲಿ ಎಲ್ಲಾ ಅಫ್ಘಾನ್‌ ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ” ಎಂದು ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌ ಹೇಳಿದ್ದಾರೆ.

ತಾಲಿಬಾನ್‌ನ ಚೆಕ್‌ ಪಾಯಿಂಟ್‌ಗಳನ್ನು ದಾಟಿ ಹಾಗೂ ತಾಲಿಬಾನ್‌ನ ಕ್ರೂರತೆಯನ್ನು ಮೀರಿ ಸ್ಪಾನಿಷ್‌ ಮಿಲಟರಿ ಯ ದಿನದ ವಿಮಾನವನ್ನು ಏರಲು ಜನರು ಸಂಕಷ್ಟಪಡುತ್ತಿದ್ದಾರೆ. ಸಾಧ್ಯವಾದಷ್ಟು ಜನರನ್ನು ನಾವು ಅಫ್ಘಾನಿ ಸ್ತಾನದಿಂದ ಕರೆ ತರುತ್ತೇವೆ. ಆದರೆ ಬೇರೆ ಕಾರಣದಿಂದಾಗಿ ಜನರು ಉಳಿದರೆ ಅದು ಅಲ್ಲಿನ ಸ್ಥಿತಿಯ ಮೇಲೆ ಆಧಾರಿತವಾಗುತ್ತದೆ,” ಎಂದು ರೋಬಲ್ಸ್‌ ಹೇಳಿದ್ದಾರೆ.

ಕಾಬೂ‌ಲ್‌ಗೆ ಬಂದರೂ ವಿಮಾನ ನಿಲ್ದಾಣದೊಳಗೆ ಬರುವುದು ಕಷ್ಟವಾಗುತ್ತಿದೆ. ತಾಲಿಬಾನ್‌ ಉಗ್ರರು ಹೆಚ್ಚು ಆಕ್ರೋಶಕ್ಕೆ ಒಳಗಾಗಿದ್ದಾರೆ. ಗುಂಡಿನ ದಾಳಿ, ಕ್ರೌರ್ಯವನ್ನು ತಾಲಿಬಾನಿಗರು ಪ್ರದರ್ಶನ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸ್ಥಿತಿಯು ಸಂಪೂರ್ಣವಾಗಿ ನಾಟಕೀಯವಾಗಿದೆ,” ಎಂದು ಅಭಿಪ್ರಾಯಪಟ್ಟರು.

ಸುಮಾರು 700 ಜನರನ್ನು ಸ್ಪೇನ್‌ ಅಫ್ಘಾನಿಸ್ತಾನದಿಂದ ವಾಪಾಸ್‌ ಕರೆ ತಂದಿದೆ. ತಾಲಿಬಾನ್‌ ಉಗ್ರರ ಆತಂಕ ದಲ್ಲೇ ಅಲ್ಲಿ ಉಳಿದಿದ್ದಾರೆ. ನಾವು ಕೊನೆಯ ವರೆಗೂ ಅಲ್ಲಿಂದ ಸಾಧ್ಯವಾದಷ್ಟು ಜನರನ್ನು ವಾಪಾಸ್‌ ಕರೆಸಿಕೊಳ್ಳುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ಯಾನದಿಂದ ನಿರ್ದಿಷ್ಟವಾಗಿ ಎಷ್ಟು ಜನರನ್ನು ವಾಪಾಸ್‌ ಕರೆಸಿಕೊಳ್ಳಲಾಗುವುದು ಎಂಬ ಪ್ರಶ್ನೆಗೆ ಸ್ಪೇನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯುಎಸ್‌ ಅಧ್ಯಕ್ಷ ಜೋ ಬೈಡೆನ್‌, ಆಗಸ್ಟ್‌ 31 ರವರೆಗೆ ಈ ಸ್ಥಳಾಂತರ ಕಾರ್ಯ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ.