Saturday, 23rd November 2024

ಕಾಬೂಲ್ ನಲ್ಲಿ ಕಾರ್ ಬಾಂಬ್ ದಾಳಿ: ಎಂಟು ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಉಗ್ರರು ಭೀಕರ ಕಾರ್ ಬಾಂಬ್ ದಾಳಿ ನಡೆಸಿದ್ದು, ಕನಿಷ್ಟ 8 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಆಫ್ಘನ್ ಸಂಸದರೊಬ್ಬರನ್ನು ಸ್ಥಳಾಂತರ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಸಂಸದ ಖಾನ್ ಮೊಹಮ್ಮದ್ ವಾರ್ಡಕ್ ರನ್ನು ಭದ್ರತೆಯಲ್ಲಿ ಸ್ಥಳಾಂತರಿಸುತ್ತಿದ್ದಾಗ ಈ ದಾಳಿ ನಡೆದಿದ್ದು, ದೊಡ್ಡ ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿಸಿ ಸ್ಫೋಟಗೊಳಿಸ ಲಾಗಿದೆ. ದಾಳಿಯಲ್ಲಿ ಸಂಸದ ವಾರ್ಡಕ್ ಕೂಡ ಗಾಯಗೊಂಡಿದ್ದಾರೆ. ಅವರೊಂದಿಗೆ ಸುಮಾರು 15 ಮಂದಿ ಗಾಯಗೊಂಡಿ ದ್ದಾರೆ.

ಸ್ಫೋಟದ ರಭಸಕ್ಕೆ ಸಮೀಪದಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುತ್ತಮುತ್ತಲಿನ ವಾಹನಗಳಿಗೂ ಬೆಂಕಿ ಹೊತ್ತಿ ಕೊಂಡಿದೆ. ಆರಂಭದಲ್ಲಿ ಈ ದಾಳಿಯ ಹೊಣೆಯನ್ನೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿರಲಿಲ್ಲವಾದರೂ, ಬಳಿಕ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ತಾನೇ ಈ ದಾಳಿ ಮಾಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ ಎಂದು ನ್ಯಾಟೋ ಮತ್ತು ಪ್ರಾಂತೀಯ ಅಧಿಕಾರಿಗಳು ಸ್ಪಷ್ಟನೆ ನೀಡಿವೆ.

ಗಿಲಾನ್ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿ ದ್ದಾರೆ, ಆದರೆ ರಿಕ್ಷಾವೊಂದರ ಹಿಂಭಾಗದಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಸಾಕ್ಷಿಗಳು ಹೇಳಿದ್ದಾರೆ ಎಂದು ಬಿಬಿಸಿ ವರದಿ ತಿಳಿಸಿದೆ. ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ ಎಂದು ತಾಲಿಬಾನ್ ಉಗ್ರರು ಹೇಳಿದ್ದಾರೆ.