ಬಾಗ್ಧಾದ್ : ಅಫ್ಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ಶಿರ್ಜಾದ್ ಜಿಲ್ಲೆಯ ಸೇನಾ ನೆಲೆಯ ಬಳಿ ಶನಿವಾರ ಕಾರ್ ಬಾಂಬ್ ಸ್ಫೋಟಗೊಂಡು ಎಂಟು ಮಂದಿ ಆಫ್ಘನ್ ಸೈನಿಕರು ಮೃತಪಟ್ಟಿದ್ದಾರೆ.
ಶಿರ್ಜಾದ್ ಜಿಲ್ಲೆಯ ಗನುಮಕ್ ಪ್ರದೇಶದಲ್ಲಿ ಉಗ್ರರು ಸ್ಫೋಟಕ ತುಂಬಿದ ಸೇನಾ ವಾಹನವನ್ನು ಸ್ಫೋಟಿಸಿ ಎಂಟು ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಂಗರ್ ಹಾರ್ ಪ್ರಾಂತೀಯ ರಾಜಧಾನಿ ಜಲಾಲಾಬಾದ್ ನಗರದಲ್ಲಿ ಉಗ್ರರು ಸ್ಫೋಟಿಸಲು ಯತ್ನಿಸುತ್ತಿದ್ದ ಅದೇ ಜಿಲ್ಲೆಯಿಂದ ಮತ್ತೊಂದು ಸ್ಫೋಟಕ ತುಂಬಿದ ವಾಹನವನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾ ಗಿದೆ. ಈ ಮಧ್ಯೆ ಶಿರ್ಜಾದ್ ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ತಾಲಿಬಾನ್ ಉಗ್ರಗಾಮಿ ಸಂಘಟನೆ ಹೊತ್ತು ಕೊಂಡಿದೆ.
ಶಿರ್ಜಾದ್ ಜಿಲ್ಲೆಯಲ್ಲಿ 05:30 ರ ಸುಮಾರಿಗೆ ಆತ್ಮಾಹುತಿ ಬಾಂಬರ್ ಮುಲ್ಲಾ ಮೊಹಮ್ಮದ್ ಯೂಸುಫ್ ಕಂದಹರಿ ತನ್ನ ಸ್ಫೋಟಕ ವಾಹನದೊಂದಿಗೆ ಸ್ಫೋಟಿಸಿಕೊಂಡಿದ್ದಾನೆ ಎಂದು ಎಎನ್ ಐ ವರದಿ ಮಾಡಿದೆ.