Thursday, 9th January 2025

Cardinal: ಕಾರ್ಡಿನಲ್ ಪದವಿಗೇರಿದ ಭಾರತೀಯ ಕ್ರೈಸ್ತ ಧರ್ಮ ಪ್ರಚಾರಕರನ್ನು ಶ್ಲಾಘಿಸಿದ ಪಿಎಂ ಮೋದಿ!

ನವದೆಹಲಿ: ಭಾರತೀಯ ಧರ್ಮಬೋಧಕ ಜಾರ್ಜ್ ಜೇಕಬ್ ಕೂವಕಾಡ್ (George Jacob Koovakad) ಅವರನ್ನು ಪವಿತ್ರ ರೋಮನ್ ಚರ್ಚ್‌ನ (Holy Roman Catholic Church) ಕಾರ್ಡಿನಲ್ (Cardinal) ಆಗಿ ಪೋಪ್ ಪ್ರಾನ್ಸಿಸ್ (Pope Francis) ಅವರು ಪದೋನ್ನತಿಗೊಳಿಸಿದ್ದಾರೆ. ಈ ವಿಷಯಕ್ಕೆ ಸಂತೋಷ ವ್ಯಕ್ತಪಡಿಸಿರುವ ಪ್ರದಾನಿ ನರೇಂದ್ರ ಮೋದಿ (Narendra Modi) ಅವರು, ಇದು ಸಂತೋಷದ ವಿಚಾರವಾಗಿದ್ದು ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಭಾನುವಾರ ಹೇಳಿದ್ದಾರೆ.

‘ಜಾರ್ಜ್ ಕಾರ್ಡಿನಲ್ ಕೂವಕಾಡ್ ಅವರು ಜೀಸಸ್ ಕ್ರಿಸ್ತರ (Jesus Christ) ಅನುಯಾಯಿಯಾಗಿ ತಮ್ಮ ಜೀವನವನ್ನು ಮಾನವ ಜನಾಂಗದ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ’ ಎಂದು ಪ್ರದಾನಿ ಮೋದಿ ಅವರು ಜಾರ್ಜ್ ಅವರ ಸೇವೆಯನ್ನು ಪ್ರಶಂಸಿದ್ದಾರೆ.

‘ಇದು ಭಾರತೀಯರೆಲ್ಲರಿಗೂ ಸಂತೋಷದ ಮತ್ತು ಹೆಮ್ಮೆಯ ಕ್ಷಣವಾಗಿದೆ! ಪೋಪ್ ಪ್ರಾನ್ಸಿಸ್ ಅವರಿಂದ ಪದೋನ್ನತಿ ಹೊಂದಿ ಪವಿತ್ರ ರೋಮನ್ ಚರ್ಚ್ ಕಾರ್ಡಿನಲ್ ಪದವಿಗೇರಿದ ಜಾರ್ಜ್ ಜೇಕಬ್ ಕೂವಕಾಡ್ ಅವರ ಸೇವಾ ಸಾಧನೆ ಎಲ್ಲರಿಗೂ ಮಾದರಿಯಾಗಿದೆ’ ಎಂದು ಪ್ರದಾನಿ ಮೋದಿ ಅವರು ತನ್ನ ‘ಎಕ್ಸ್’ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

‘ಜಾರ್ಜ್ ಕಾರ್ಡಿನಲ್ ಕೂವಕಾಡ್ ಅವರು ತನ್ನ ಜೀವನವನ್ನು ಮಾನವ ಜನಾಂಗದ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಅವರ ಭವಿಷ್ಯದ ಯೋಜನೆಗಳಿಗೆ ನನ್ನ ಶುಭ ಕಾಮನೆಗಳು’ ಎಂದು ಪ್ರದಾನಿ ಮೋದಿ ಶುಭ ಹಾರೈಸಿದ್ದಾರೆ.

ವ್ಯಾಟಿಕನ್ ಸಿಟಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 51 ವರ್ಷ ಪ್ರಾಯದ ಕೂವಕಾಡ್ ಅವರನ್ನು ಪೋಪ್ ಪ್ರಾನ್ಸಿಸ್ ಅವರು ಕಾರ್ಡಿನಲ್ ಪದವಿಗೇರಿಸಿದ್ದಾರೆ.

ಇದನ್ನೂ ಓದಿ: Model Ravena Hanniely: ಮತ್ತೊಮ್ಮೆ ವರ್ಜಿನ್‌ ಆಗೋಕೆ ಈ ರೂಪದರ್ಶಿ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತೇ?

ಈ ಸಮಾರಂಭವು ಪ್ರಸಿದ್ಧ ಸೇಂಟ್ ಪೀಟರ್ಸ್ ಬಸಿಲಿಕಾದಲ್ಲಿ ನಡೆಯಿತು. ವಿಶ್ವದ ವಿವಿಧ ಕಡೆಗಳಿಂದ ಆಗಮಿಸಿದ್ದ ಅತಿಥಿ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ಸಮಾರಂಭದಲ್ಲಿ ವಿವಿಧ ದೇಶಗಳ 21 ಧರ್ಮಪ್ರಚಾರಕರನ್ನು ಕಾರ್ಡಿನಲ್ ಪದವಿಗೇರಿಸಲಾಯಿತು.

ಈ ಕಾರ್ಯಕ್ರಮವು ಭಾರತಿಯ ಕಾಲಮಾನ ರಾತ್ರಿ 8.30ಕ್ಕೆ ಪ್ರಾರಂಭಗೊಂಡಿತು. 21 ನಿಯೋಜಿತ ಕಾರ್ಡಿನಲ್‌ಗಳು ಸೇಂಟ್ ಪೀಟರ್ಸ್ ಬಸಿಲಿಕಾಗೆ ಮೆರವಣಿಗೆಯಲ್ಲಿ ಆಗಮಿಸಿದರು. ಈ ಸಂದರ್ಭದಲ್ಲಿ ಪೋಪ್ ಅವರು ನೆರದವರುನ್ನದ್ದೇಶಿಸಿ ಮಾತನಾಡಿದರು. ಬಳಿಕ ಅವರು ಸಮಾರಂಭದ ಕ್ಯಾಪ್ ಹಾಗೂ ಉಂಗುರಗಳನ್ನು ನಿಯೋಜಿತ ಕಾರ್ಡಿನಲ್‌ಗಳಿಗೆ ನಿಡಿದರು ಬಳಿಕ ಪ್ರಾರ್ಥನೆ ನಡೆಯಿತು.

ಈ ಪದವಿಗೆ ಕೂವಕಾಡ್ ನೇಮಕಗೊಳ್ಳುವದರೊಂದಿಗೆ ಭಾರತದ ಕಾರ್ಡಿನಲ್ ಗಳ ಸಂಖ್ಯೆ ಆರಕ್ಕೇರಿದಂತಾಗಿದೆ. ಈ ಮೂಲಕ ವ್ಯಾಟಿಕನ್‌ನಲ್ಲಿ ಭಾರತೀಯ ಪ್ರಾತಿನಿಧ್ಯ ಇನ್ನಷ್ಟು ಬಲ ಪಡೆದುಕೊಂಡಿದೆ.