Sunday, 15th December 2024

ಕರೋನಾ ಭೀತಿ: ಚೀನಾದಲ್ಲಿ ವಿಮಾನಗಳ ಹಾರಾಟ ಸ್ಥಗಿತ

ಶಾಂಘೈ: ಚೀನಾದಲ್ಲಿ ಕರೋನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತ ಗೊಳಿಸಲಾಗಿದೆ.

ಗುವಾಂಗ್‌ಜೌನಲ್ಲಿ ಏಕಾಏಕಿ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಗುವಾಂಗ್‌ಜೌ ನಲ್ಲಿ 18 ಪ್ರಕರಣಗಳು ದಾಖಲಾಗಿರುವ ಕುರಿತು ವರದಿಯಾಗಿದೆ.

18 ಪ್ರಕರಣಗಳು ಗುವಾಂಗ್‌ಜೌ ಮತ್ತು ಎರಡು ಪ್ರಕರಣಗಳು ಪೋಶನ್ ನಗರದಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸೋಮ ವಾರ ಬೆಳಗ್ಗೆಯಿಂದ ಈವರೆಗೆ ಗುವಾಂಗ್‌ಜೌಬೈಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 519 ವಿಮಾನ ಗಳನ್ನು ರದ್ದುಗೊಳಿಸಲಾಗಿದೆ.

ನಗರದ ನಿವಾಸಿಗಳು ಮನೆಯಿಂದ ಹೊರ ಬಾರದಂತೆ ಸ್ಥಳೀಯ ಸರ್ಕಾರ ಸೂಚನೆ ನೀಡಿದೆ. ಮಾರುಕಟ್ಟೆ, ಮನರಂಜನಾ ತಾಣ ಗಳನ್ನು ಕೂಡ ಬಂದ್ ಮಾಡಲಾಗಿದೆ. ವಿಮಾನ, ರೈಲು ಅಥವಾ ಖಾಸಗಿ ವಾಹನಗಳ ಮೂಲಕ ಗುವಾಂಗ್‌ಜೌ ನಗರದಿಂದ ಬೇರೆಕಡೆಗೆ ಪ್ರಯಾಣಿಸುವವರು ಕಡ್ಡಾಯವಾಗಿ 72 ಗಂಟೆಯೊಳಗಿನ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.