ಕೀವ್: ರಷ್ಯಾ ಸೇನೆಯಿಂದ ಮತ್ತೆ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ಉಕ್ರಾನಿಯನ್ ನಗರಗಳಲ್ಲಿ ಕದನ ವಿರಾಮ ನಡೆಸುವುದಾಗಿ ರಷ್ಯಾ ಘೋಷಿಸಿದೆ.
ಕೀವ್, ಖಾರ್ಕೋವ್, ಸುಮಿ ಮತ್ತು ಮಾರಿಯುಪೋಲ್ ನಗರಗಳಲ್ಲಿನ ವಿಪತ್ತು ಮಾನವೀಯ ಪರಿಸ್ಥಿತಿ ಮತ್ತು ಅದರ ತೀಕ್ಷ್ಣವಾದ ತೀವ್ರತೆಯನ್ನು ಗಮನ ದಲ್ಲಿಟ್ಟುಕೊಂಡು ಮತ್ತು ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ರಷ್ಯಾ ಒಕ್ಕೂಟದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಮಾಡಿದ ವೈಯಕ್ತಿಕ ವಿನಂತಿಯ ಮೇರೆಗೆ, ರಷ್ಯಾದ ಸಶಸ್ತ್ರ ಪಡೆಗಳು ಕದನ ವಿರಾಮವನ್ನು ಘೋಷಿಸಿದೆ.
ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಮಹತ್ವದ ಮಾತನಕತೆ ನಡೆಸಲಿ ದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಕೆಲವು ದಿನಗಳ ನಂತರ ಪ್ರಧಾನಿ ಮೋದಿ ಅವರು ಕಳೆದ ಫೆಬ್ರವರಿ 26 ರಂದು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದರು. ಬಳಿಕ ಮತ್ತೆ ಇಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗೆ 2ನೇ ಬಾರಿ ಮಾತುಕತೆ ಯನ್ನು ದೂರವಾಣಿ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ನಡೆಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಉಕ್ರೇನ್ ನಲ್ಲಿರುವ ಭಾರತೀಯರ ಸ್ಥಳಾಂತರದ ಕುರಿತಂತೆ ಮಹತ್ವದ ಮಾತುಕತೆಯನ್ನು ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಸಲಿದ್ದಾರೆ ಎನ್ನಲಾಗಿದೆ.