ಬೀಜಿಂಗ್: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆನ್ನಿಸಿಕೊಂಡಿರುವ ಚೀನದಲ್ಲಿ, ಜನನಪ್ರಮಾಣವೇ ಕುಸಿಯುತ್ತಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ತಲೆಕೆಡಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಇದರಲ್ಲೊಂದು ಅತ್ಯಂತ ವಿಶೇಷವಾಗಿದೆ.
ಫ್ಯಾನ್ ಮೀ ಶೈಕ್ಷಣಿಕ ಸಮೂಹದಡಿಯಲ್ಲಿ ಬರುವ 9 ಕಾಲೇಜುಗಳು ಎ .1ರಿಂದ ಎ .7ರ ವರೆಗೆ ರಜೆಯನ್ನೇ ಘೋಷಿಸಿವೆ. ತಮ್ಮ ವಿದ್ಯಾರ್ಥಿಗಳಿಗೆ ಪ್ರಕೃತಿಯ ಸನಿಹ ಹೋಗಿ, ನಿಮ್ಮ ಜೀವನವನ್ನು ಆನಂದಿಸಿ ಎಂದು ಪರೋಕ್ಷವಾಗಿ ಸೂಚಿಸಿವೆ.
ಈ ಮೂಲಕ ವಿದ್ಯಾರ್ಥಿಗಳು ದೇಶದ ಜನಸಂಖ್ಯೆ ವೃದ್ಧಿಸಲು ಕೊಡುಗೆ ನೀಡಬೇಕೆಂದು ಆಶಯ. ಇನ್ನು ಸ್ಥಳೀಯ ಕಂಪನಿಗಳು, ಪ್ರಾಂತ್ಯಗಳು, ನಗರಗಳು ತಮ್ಮ ಉದ್ಯೋಗಿಗಳಿಗೆ ವಿವಾಹಕ್ಕೆಂದೇ 1 ತಿಂಗಳು ರಜೆ ನೀಡುತ್ತಿವೆ. ನಗರದ ಹುಡುಗಿಯರು ಹಳ್ಳಿಯ ವಯಸ್ಸಾದ ಹುಡುಗರನ್ನು ವಿವಾಹವಾಗುವಂತೆ ಪ್ರಚೋದಿಸುತ್ತಿವೆ.