Thursday, 12th December 2024

ಮುಂದಿನ ವಾರ ಬ್ರಿಟನ್‌ನಲ್ಲಿ ಕೊರೊನಾ ಲಸಿಕೆ ಲಭ್ಯ

ಲಂಡನ್: ಬ್ರಿಟನ್‍ನಲ್ಲಿ ಮುಂದಿನ ವಾರದಿಂದ ಲಸಿಕೆ ಬಿಡುಗಡೆ ಮಾಡಲಿದೆ. ಫಿಜರ್ ಮತ್ತು ಬಯೋನೆಟಿಕ್ ಸಂಸ್ಥೆಗಳು ತಯಾ ರಿಸಿರುವ ಲಸಿಕೆ ಫಲಿತಾಂಶ ಪ್ರಕಟಿಸಿದ್ದು, ಜನರಿಗೆ ವಿತರಿಸಲು ಸುರಕ್ಷಿತವಾಗಿದೆ ಎಂದು ವಿತರಣೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ.

ವಿಶ್ವದಲ್ಲೇ ಕೋವಿಡ್‍ಗೆ ಲಸಿಕೆ ಬಿಡುಗಡೆ ಮಾಡಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್ ಕಾರಣವಾಗಿದೆ. ಬ್ರಿಟನ್‍ನ ಔಷಧ ಮತ್ತು ಆರೋಗ್ಯ ವರ್ಧಕ ಉತ್ಪನ್ನಗಳ ನಿಯಂತ್ರಣ ಸಂಸ್ಥೆ, ಲಸಿಕೆ ಬಗ್ಗೆ ನಮಗೆ ವಿಶ್ವಾಸವಿದೆ. ಈಗಾಗಲೇ ರೋಗಿಗಳ ಮೇಲೆ ಹಾಗೂ ವೈಜ್ಞಾನಿಕ ಪ್ರಯೋಗದಲ್ಲಿ ಶೇ.95ರಷ್ಟು ಪರಿಣಾಮ ಬೀರಿದೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದೆ.

ಅಮೆರಿಕ ಮೂಲದ ಫಿಜರ್ ಮತ್ತು ಜರ್ಮನ್‌ ಮೂಲದ ಬಯೋನೆಟಿಕ್ ಸಂಸ್ಥೆಗಳು ಜತೆಯಾಗಿ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಎಲ್ಲಾ ವಯೋಮಾನದ ಜನರಿಗೂ ಇದನ್ನು ಬಳಸಬಹುದು ಎಂದು ತಿಳಿಸಿದೆ.