Thursday, 12th December 2024

Donald Trump: 43 ಅಡಿ ಎತ್ತರದ ಡೊನಾಲ್ಡ್‌ ಟ್ರಂಪ್‌ ಬೆತ್ತಲೆ ಪ್ರತಿಮೆ ಪತ್ತೆ

Donald trump

ವಾಷಿಂಗ್ಟನ್‌: ಕೆಲವು ದಿನಗಳ ಹಿಂದೆಯಷ್ಠೆ ಬ್ಯಾಕ್‌ ಟು ಬ್ಯಾಕ್‌ ದಾಳಿಗೊಳಗಾಗಿ ಸುದ್ದಿಯಲ್ಲಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ(US Presidential election), ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌(Donald Trump) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಬೆತ್ತಲೆ ಪ್ರತಿಮೆಯೊಂದು ಲಾಸ್‌ ವೇಗಾಸ್‌ನ ಹೊರ ಭಾಗದಲ್ಲಿ ಪತ್ತೆಯಾಗಿದೆ. ಇದೀಗ ಈ ಪ್ರತಿಮೆಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿವೆ.

ಸುಮಾರು 43-ಅಡಿ ಎತ್ತರದ ಈ ಪ್ರತಿಮೆ ಉತಾಹ್‌ಗೆ ಹೋಗುವ ಪ್ರದೇಶದಲ್ಲಿ ಪತ್ತೆಯಾಗಿದೆ. ಮಾಧ್ಯಮ ವರದಿ ಪ್ರಕಾರ, ಈ ಪ್ರತಿಮೆಯನ್ನು ರೆಬಾರ್ ಮೇಲೆ ಫೋಮ್ನಿಂದ ಮಾಡಲ್ಪಟ್ಟಿದೆ ಮತ್ತು ಸುಮಾರು 6000 ಪೌಂಡ್ ತೂಕ ಹೊಂದಿದೆ ಎನ್ನಲಾಗಿದೆ. ಈ ಬೆತ್ತಲೆ ಪ್ರತಿಮೆ ಸ್ಥಾಪಿಸಲಾಗಿದ್ದು ಪ್ರತಿಮೆಯ ಪೀಠದಲ್ಲಿ ` ಮೊಂಡ ಮತ್ತು ಅಶ್ಲೀಲ’ ಎಂದು ಬರೆಯಲಾಗಿದೆ. ಇನ್ನು ಈ ಬಗ್ಗೆ ಡೊನಾಲ್ಡ್ ಟ್ರಂಪ್ ಅಥವಾ ಅವರ ಬೆಂಬಲಿಗರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕೃತ್ಯ ಯಾರು ಎಸಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.

ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಕ್ರಾಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಬಣದ ಪ್ರಚಾರ ಕಾರ್ಯಕ್ರಮ ಪರಸ್ಪರ ಕೆಸರೆರಚಾಟಕ್ಕೆ ತಿರುಗಿದ್ದು ಕಮಲಾ ಹ್ಯಾರಿಸ್ ಚುನಾವಣಾ ರ್ಯಾಲಿ ನಡೆಯುವ ಪ್ರದೇಶದಲ್ಲಿ ಟ್ರಂಪ್ ಅವರ 43 ಅಡಿ ಎತ್ತರದ ಬೆತ್ತಲೆ ಪ್ರತಿಮೆ ಸ್ಥಾಪಿಸಿರುವ ಘಟನೆ ವರದಿಯಾಗಿದೆ

ಈ ಹಿಂದೆಯೂ ಇಂತಹದ್ದೇ ಪ್ರತಿಮೆ ಪತ್ತೆ

ಟ್ರಂಪ್ 2016 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗಲೂ ಅವರ ಇಂತಹದ್ದೇ ಅನೇಕ ಬೆತ್ತಲೆ ಪ್ರತಿಮೆಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಒಂದನ್ನು ಹಾಂಟೆಡ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿತ್ತು. ಇದಾದ ಬಳಿಕ ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಮತ್ತೆ ಅಂತಹದ್ದೇ ಪ್ರತಿಮೆ ಪತ್ತೆಯಾಗಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ದಯವಿಟ್ಟು ಡೊನಾಲ್ಡ್ ಅವರನ್ನು ಅಪಹಾಸ್ಯ ಮಾಡುವ ಡೊನಾಲ್ಡ್ ಟ್ರಂಪ್ ಅವರ ಪ್ರತಿಮೆಯನ್ನು ಕೆಳಗಿಳಿಸಲು ಆದೇಶಿಸಿ ಎಂದು ಹಲವು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

ಸೆ.18ರಂದು ಟ್ರಂಪ್‌ ಮೇಲೆ ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಅವರಿಗೆ ಎದುರಾದ ಎರಡನೇ ಅಪಾಯ ಅದಾಗಿತ್ತು. ಅಧ್ಯಕ್ಷೀಯ ಚುನಾವಣಾ ಪ್ರಚಾರ ಮುಗಿಯಲು ಒಂದು ದಿನ ಬಾಕಿ ಇರುವಾಗ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕೋರ್ಸ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇನ್ನು ಟ್ರಂಪ್‌ ಮೇಲೆ ಎರಡನೇ ಬಾರಿ ಗುಂಡಿನ ದಾಳಿ ನಡೆದಿರುವ ಬೆನ್ನಲ್ಲೇ ಮತ್ತೊಂದು ಅಟ್ಯಾಕ್‌ಗೆ ರೂಪಿಸಲಾಗಿದ್ದ ಸಂಚು ಬಯಲಾಗಿತ್ತು. ಕಳೆದ ಬುಧವಾರ ಸಂಜೆ ಲಾಂಗ್ ಐಲ್ಯಾಂಡ್‌ನಲ್ಲಿನಿಗದಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ರ್ಯಾಲಿಯ ಸ್ಥಳದ ಸಮೀಪ ವಾಹನವೊಂದರಲ್ಲಿ ಭಾರೀ ಸ್ಫೋಟಕಗಳು ಪತ್ತೆಯಾಗಿವೆ.

ಈ ಸುದ್ದಿಯನ್ನೂ ಓದಿ: Donald Trump: ಇರಾನ್‌ನಿಂದ ನನ್ನ ಹತ್ಯೆಗೆ ಸಂಚು- ಡೆಡ್ಲಿ ಅಟ್ಯಾಕ್‌ ಬಗ್ಗೆ ಮೌನ ಮುರಿದ ಟ್ರಂಪ್‌