Friday, 22nd November 2024

ಕೆರ್ಮಾಡೆಕ್​ ದ್ವೀಪದ ಬಳಿ ಪ್ರಬಲ ಭೂಕಂಪನ: 8.1 ತೀವ್ರತೆ

ನ್ಯೂಜಿಲೆಂಡ್: ಕೆರ್ಮಾಡೆಕ್​ ದ್ವೀಪದ ಬಳಿ ಸಮುದ್ರದಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದ್ದು, 8.1 ತೀವ್ರತೆ ದಾಖಲಾಗಿದೆ.

3ನೇ ಭೂಕಂಪನ ಇದಾಗಿದ್ದು, ಗುರುವಾರ ನ್ಯೂಜಿಲೆಂಡ್ ಕರಾವಳಿಯಿಂದ ಸುಮಾರು 1,000 ಕಿಲೋಮೀಟರ್ ದೂರದಲ್ಲಿ ಭೂಮಿ ಕಂಪಿಸಿತ್ತು. 7.3 ಹಾಗೂ 7.4 ತೀವ್ರತೆಯ ಭೂಕಂಪನದ ಬೆನ್ನಲ್ಲೇ ಇಂದು ಮತ್ತೊಮ್ಮೆ ಭೂಕಂಪನ ಉಂಟಾಗಿದೆ.

10 ಅಡಿ ಎತ್ತರದ ಅಲೆಗಳು ಫ್ರೆಂಚ್ ಭೂಪ್ರದೇಶದತ್ತ ಬರುತ್ತಿದ್ದು, ಕರಾವಳಿ ನಿವಾಸಿಗಳಿಗೆ ಸುನಾಮಿ ಆತಂಕ ಎದುರಾಗಿದೆ. ಮುನ್ನೆಚ್ಚರಿಕ ಕ್ರಮವಾಗಿ ಜನರನ್ನ ಎತ್ತರದ ಪ್ರದೇಶಗಳಿಗೆ ಸ್ಥಳಾಂತರವಾಗಬೇಕು ಎಂದು ನ್ಯಾಷನಲ್ ಎಮರ್ಜೆನ್ಸಿ ಮ್ಯಾನೇಜ್​ಮೆಂಟ್​ ಏಜೆನ್ಸಿ ಎಚ್ಚರಿಕೆ ನೀಡಿದೆ.