ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಬುಧವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ.
ಆಗ್ನೇಯ ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ 51 ಕಿ.ಮೀ ಆಳದಲ್ಲಿ ಸುಮಾರು 44 ಕಿ.ಮೀ (27 ಮೈಲಿ) ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪನದಲ್ಲಿ 130 ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ಮಾಹಿತಿ ತಿಳಿದುಬಂದಿದೆ.
ತಾಲಿಬಾನ್ ಆಡಳಿತದ ನೈಸರ್ಗಿಕ ವಿಪತ್ತು ಸಚಿವಾಲಯದ ಮುಖ್ಯಸ್ಥ ಮೊಹಮ್ಮದ್ ನಾಸಿಮ್ ಹಕ್ಕಾನಿ ಅವರು ಹೆಚ್ಚಿನ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.