Tuesday, 5th November 2024

ದಕ್ಷಿಣ ಫಿಲಿಪೈನ್ಸ್‌ನಲ್ಲಿ 6.0 ತೀವ್ರತೆ ಭೂಕಂಪ

ಫಿಲಿಪೈನ್ಸ್‌: ಮಂಗಳವಾರ ದಕ್ಷಿಣ ಫಿಲಿಪೈನ್ಸ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಭೂಕಂಪವು ಮಂಗಳವಾರ ಸುಮಾರು 2:00 pm (0600 GMT) ಕ್ಕೆ ಮರಾಗುಸನ್ ಪುರಸಭೆಯಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಮಿಂಡಾನಾವೊ ದ್ವೀಪದ ದವಾವೊ ಡಿ ಓರೊದ ಪರ್ವತ ಪ್ರಾಂತ್ಯದಲ್ಲಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ವರದಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮರಗುಸನ್ ವಿಪತ್ತು ಕಚೇರಿಯ ಉದ್ಯೋಗಿ ಯೊಬ್ಬರು ತಿಳಿಸಿದ್ದಾರೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ.