ಟೋಕಿಯೊ: ಒಲಿಂಪಿಕ್ಸ್ ಆರಂಭಕ್ಕೆ ದಿನಗಳು ಆರಂಭವಾಗುತ್ತಿದ್ದಂತೆ, ಜಪಾನ್ ಸರ್ಕಾರ ಟೋಕಿಯೊದಲ್ಲಿ ಗುರುವಾರ ಹೊಸದಾಗಿ ತುರ್ತು ಪರಿಸ್ಥಿತಿ ಹೇರಿದೆ.
ಕ್ರೀಡೆಗಳ ವೇಳೆಯೂ ನಿರ್ಬಂಧ ಕ್ರಮಗಳು ಮುಂದುವರಿಯಲಿದೆ. ಜು.23ರಂದು ಟೋಕಿಯೊ ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಾರಂಭ ನಿಗದಿ ಯಾಗಿದೆ. ಆದರೆ ರಾಜಧಾನಿಯಲ್ಲಿ ಸೋಂಕು ಪ್ರಕರಣಗಳು ಏರುತ್ತಿವೆ. ಅದರಲ್ಲೂ ಅಪಾಯಕಾರಿಯಾಗಿರುವ ಡೆಲ್ಟಾ ರೂಪಾಂತರ ಸೋಂಕು ಹರಡುತ್ತಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.
ಹೊಸ ನಿರ್ಬಂಧಗಳು ಆಗಸ್ಟ್ 22ರವರೆಗೆ ಜಾರಿಯಲ್ಲಿರಲಿದೆ. ಲಸಿಕೆ ಪರಿಣಾಮಗಳು ಕಂಡು ಬಂದಲ್ಲಿ ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಯ ಸಮಸ್ಯೆ ಸುಧಾರಣೆ ಆದರಲ್ಲಿ ಸರ್ಕಾರ ನಿಗದಿಗಿಂತ ಬೇಗ ತುರ್ತುಸ್ಥಿತಿ ಹಿಂಪಡೆಯಲೂಬಹುದು’ ಎಂದು ಎಂದು ಜಪಾನ್ ಪ್ರಧಾನಿ ಯೊಶಿಹಿಡೆ ಸುಗಾ ತಿಳಿಸಿದ್ದಾರೆ.
ಹೊಸ ನಿರ್ಬಂಧಗಳ ಪ್ರಕಾರ ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ರಾತ್ರಿ 8 ಗಂಟೆಯೊಳಗೆ ಬಾರ್‌ಗಳನ್ನು ಬಂದ್ ಮಾಡ ಬೇಕಾಗುತ್ತದೆ. ಸಂಗೀತ ಕಛೇರಿ, ಸಭೆ, ಸಮ್ಮೇಳನಗಳು 9 ಗಂಟೆ ನಂತರ ನಡೆಯುವಂತಿಲ್ಲ.
ಜಪಾನ್‌ನಲ್ಲಿ ಕೆಲಸಮಯದಿಂದ ಸೀಮಿತ ಅವಧಿಯ ಲಾಕ್‌ಡೌನ್‌ಗಳನ್ನು ಹೇರಲಾಗುತ್ತಿದೆ. ಇದುವರೆಗೆ 14,900 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.