ಸಿಯೋಲ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧದ ಅಲ್ಪಾವಧಿಯ ದಂಗೆಯಂತೆಯೇ ದಕ್ಷಿಣ ಕೊರಿಯಾದಲ್ಲೂ ಸೇನಾಡಳಿತ ಕಾನೂನು (Emergency Martial Law) ಜಾರಿಗೆ ತರಲು ನಿರ್ಧರಿಸಿದ ಅಧ್ಯಕ್ಷ (South Korea President) ಯೂನ್ ಸುಕ್ ಯೆಯೋಲ್ (Yoon Suk Yeol) ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಯುನ್ ಸುಕ್ ಯೋಲ್ ಅವರು ಮಂಗಳವಾರ ರಾತ್ರಿ ತುರ್ತು ಸಮರ ಕಾನೂನು ಘೋಷಣೆಯನ್ನು ಹೊರಡಿಸಿದ ಕೆಲವೇ ಗಂಟೆಗಳ ಅನಂತರ ಅದನ್ನು ಮರಳಿ ಪಡೆದಿದ್ದಾರೆ. ರಾಜಕೀಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸಮರ ಕಾನೂನನ್ನು ಹೇರುವ ಹಠಾತ್ ಕ್ರಮವು ಯೋಲ್ ವಿರುದ್ಧ ರಾಜಕೀಯ ವಿರೋಧಿಗಳು ದಂಗೆ ಏಳುವಂತೆ ಮಾಡಿತ್ತು. ಪ್ರತಿಭಟನೆಯ ಬಳಿಕ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿ ತುರ್ತು ಸಮರ ಕಾನೂನನ್ನು ಹಿಂತೆಗೆದುಕೊಂಡಿತು.
ಒಟ್ಟಿನಲ್ಲಿ ಈ ಘಟನೆ ಯಾವಾಗ ನಡೆಯಿತು, ಹೇಗೆ ತಿರುವು ಪಡೆದುಕೊಂಡಿತು, ಅಂತಿಮವಾಗಿ ಏನಾಯಿತು ಎನ್ನುವ ಟೈಮ್ ಲೈನ್ ಮಾಹಿತಿ ಇಲ್ಲಿದೆ.
ಡಿಸೆಂಬರ್ 3 ರಂದು ಸಂಜೆ 7.30
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಸ್ಥಳೀಯ ಕಾಲಮಾನದ ಪ್ರಕಾರ ತಡರಾತ್ರಿಯಲ್ಲಿ ಅನಿರೀಕ್ಷಿತವಾಗಿ ದೂರದರ್ಶನದಲ್ಲಿ ಭಾಷಣ ಮಾಡುತ್ತಾ ಸಮರ ಕಾನೂನನ್ನು ಘೋಷಿಸಿದರು. ಅವರ ನಿರ್ಧಾರವನ್ನು ಸಮರ್ಥಿಸಲು, ಅಧ್ಯಕ್ಷ ಯೂನ್ ಅವರು “ರಾಜ್ಯ-ವಿರೋಧಿ ಶಕ್ತಿಗಳು ದಂಗೆಯನ್ನು ಯೋಜಿಸುತ್ತಿದ್ದಾರೆ. ಇದನ್ನು ಎದುರಿಸಲು ಸಮರ ಕಾನೂನು ಅಗತ್ಯವಾಗಿತ್ತು” ಎಂದು ಹೇಳಿದ್ದಾರೆ.
ರಾತ್ರಿ 8 ಗಂಟೆ
ಅಧ್ಯಕ್ಷ ಯೂನ್ ಅವರ ತುರ್ತು ಸಮರ ಕಾನೂನಿನ ಘೋಷಣೆಯು ದಕ್ಷಿಣ ಕೊರಿಯಾದ ರಾಜಕೀಯ ಮತ್ತು ಪ್ರಪಂಚದಾದ್ಯಂತ ಆಶ್ಚರ್ಯ ಮತ್ತು ಆಘಾತ ವ್ಯಕ್ತಪಡಿಸುವಂತೆ ಮಾಡಿತ್ತು. ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ವೇಗವನ್ನು ಪಡೆದುಕೊಂಡು ವಿರೋಧ ಪಕ್ಷವು ತುರ್ತು ಸಂಸತ್ತಿನ ಅಧಿವೇಶನಕ್ಕೆ ಕರೆ ನೀಡಿತು.
ಸಮರ ಕಾನೂನನ್ನು ತೆಗೆದುಹಾಕಲು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಮನವಿ ಮಾಡಿದರು. ಸಮರ ಕಾನೂನಿಗೆ ರಾಷ್ಟ್ರೀಯ ಅಸೆಂಬ್ಲಿಗೆ ಮುಖ್ಯಸ್ಥರಾಗಲು ಪಕ್ಷಗಳು ಸ್ವಂತ ಶಾಸಕರಿಗೆ ಮನವಿ ಮಾಡಿದವು.
ರಾತ್ರಿ 8.20
ಸಮರ ಕಾನೂನು ಜಾರಿಗೆ ಬರುತ್ತದೆ
ರಾತ್ರಿ 9.30
ನ್ಯಾಶನಲ್ ಅಸೆಂಬ್ಲಿಯಲ್ಲಿ ಶಾಸಕರ ಒಟ್ಟು ಸಂಖ್ಯೆ 150ಕ್ಕೂ ಹೆಚ್ಚು ಮಂದಿ ವಿಧಾನಸಭೆಯ ಮುಖ್ಯ ಕೋಣೆಯ ಒಳಗೆ ಬಂಧಿಸಲ್ಪಟ್ಟಿದ್ದರು. ವಿಶೇಷ ಘಟಕದ ಪಡೆಗಳನ್ನು ಹೊತ್ತ ಸೇನಾ ಹೆಲಿಕಾಪ್ಟರ್‌ಗಳು ಸಂಸತ್ತಿನ ಆವರಣದಲ್ಲಿ ಬಂದು ಇಳಿದವು.
ರಾತ್ರಿ 10 ಗಂಟೆ
ಸಶಸ್ತ್ರ ಸೈನಿಕರು ಅಸೆಂಬ್ಲಿ ಕಟ್ಟಡವನ್ನು ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಹಾಗೆ ಮಾಡುವಾಗ ಅವರು ಶಾಸಕರು, ಸಹಾಯಕರು ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಇತರ ಸಿಬ್ಬಂದಿಯೊಂದಿಗೆ ಘರ್ಷಣೆ ಪ್ರಾರಂಭಿಸಿದರು.
ರಾತ್ರಿ 10.10
ಕೆಲವು ಸಶಸ್ತ್ರ ಪಡೆಗಳು ರಾಷ್ಟ್ರೀಯ ಅಸೆಂಬ್ಲಿಯ ಮುಖ್ಯ ಕಟ್ಟಡವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು.
ರಾತ್ರಿ 10.20
ಸಂಸತ್ತಿನ ಸರ್ವಸದಸ್ಯರ ಅಧಿವೇಶನ ಆರಂಭವಾಯಿತು.
ರಾತ್ರಿ 11 ಗಂಟೆ
ಶಾಸಕರು ಸಮರ ಕಾನೂನನ್ನು ತೆಗೆದುಹಾಕಲು ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ವಿಧಾನಸಭೆಯ ಸ್ಪೀಕರ್ ಸಮರ ಕಾನೂನು ಅಸಿಂಧು ಎಂದು ಘೋಷಿಸಿದರು.
ರಾತ್ರಿ 11.10
ಸೈನಿಕರು ಸಂಸತ್ ಪ್ರದೇಶವನ್ನು ತೊರೆಯಲು ಪ್ರಾರಂಭಿಸುತ್ತಾರೆ.
ಡಿಸೆಂಬರ್ 4ರಂದು ಬೆಳಗ್ಗೆ 2 ಗಂಟೆ
ಸಮರ ಕಾನೂನನ್ನು ತೆಗೆದುಹಾಕಲಾಗಿದೆ ಎಂದು ಘೋಷಿಸಲು ಅಧ್ಯಕ್ಷ ಯೂನ್ ರಾಷ್ಟ್ರಕ್ಕೆ ಎರಡನೇ ದೂರದರ್ಶನದ ಭಾಷಣ ಮಾಡಲು ಸೂಚಿಸಲಾಗುತ್ತದೆ.
ಬೆಳಗ್ಗೆ 4.20
ಸಮರ ಕಾನೂನನ್ನು ತೆಗೆದುಹಾಕುವ ಅಧಿಕೃತ ಘೋಷಣೆಯನ್ನು ಅಧ್ಯಕ್ಷರು ಮಾಡಿದ ಬಳಿಕ ಸೈನಿಕರು ತಮ್ಮ ನೆಲೆಗಳಿಗೆ ಹಿಂತಿರುಗುತ್ತಾರೆ.
ಅಧ್ಯಕ್ಷ ಯೂನ್‌ಗೆ ತೊಂದರೆ?
ಒಮ್ಮೆ ಘೋಷಣೆ ಮಾಡಿದ ಸಮರ ಕಾನೂನನ್ನು ಅಧ್ಯಕ್ಷ ಯೂನ್ ತೆಗೆದುಹಾಕಿರಬಹುದು. ಆದರೆ ಇದು ಅವರಿಗೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೆ. ಈಗಾಗಲೇ ಅವರ ವಿರುದ್ಧ ವಿರೋಧ ಪಕ್ಷದ ಶಾಸಕರು ದೋಷಾರೋಪಣೆ ಮಾಡಲು 72 ಗಂಟೆಗಳ ಒಳಗೆ ಮಸೂದೆಯನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.
ಸಮರ ಕಾನೂನ ಎಂದರೇನು?
ಸಮರ ಕಾನೂನನ್ನು ಹೇರುವುದರಿಂದ ನಾಗರಿಕ ಸರ್ಕಾರ ತಾತ್ಕಾಲಿಕವಾಗಿ ಮಿಲಿಟರಿ ಸರ್ಕಾರವಾಗಿ ಬದಲಾಗುತ್ತದೆ. ದೇಶದ ಸಂವಿಧಾನದ 77 ನೇ ವಿಧಿಯಲ್ಲಿ ಸಮರ ಕಾನೂನಿನ ಬಗ್ಗೆ ಉಲ್ಲೇಖವಿದೆ. ಈ ಕಾನೂನಿನ ಮೂಲಕ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ. ಅಲ್ಲದೇ ಕಾರ್ಯಾಂಗ, ನ್ಯಾಯಾಂಗ, ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸಲಾಗುತ್ತದೆ. ದೇಶದ ಮಾಧ್ಯಮಗಳು ಮತ್ತು ಪತ್ರಿಕೆಗಳೂ ಸಹ ಮಿಲಿಟರಿ ಆಡಳಿತದ ಅಡಿಯಲ್ಲಿ ಬರುತ್ತವೆ.
Emergency Martial Law: ದ.ಕೊರಿಯಾದಲ್ಲಿ ತುರ್ತು ಮಿಲಿಟರಿ ರೂಲ್ ಜಾರಿಯಾದ ಕೆಲವೇ ಗಂಟೆಗಳಲ್ಲಿ ವಾಪಾಸ್!
1987ರಲ್ಲಿ ದಕ್ಷಿಣ ಕೊರಿಯಾ ಸಂಸದೀಯ ಪ್ರಜಾಪ್ರಭುತ್ವ ರಾಷ್ಟ್ರವಾಗಿತ್ತು. ಬಳಿಕ ಇದೇ ಮೊದಲ ಬಾರಿಗೆ ಸಮರ ಕಾನೂನನ್ನು ಜಾರಿಗೊಳಿಸಲಾಯಿತು. ಸುಮಾರು 45 ವರ್ಷಗಳ ಹಿಂದೆ ಅಂದರೆ 1979 ರಲ್ಲಿ ದೇಶದ ದೀರ್ಘಾವಧಿಯ ಮಿಲಿಟರಿ ಸರ್ವಾಧಿಕಾರಿ ಪಾರ್ಕ್ ಚುಂಗ್-ಹೀ ಹತ್ಯೆಯಾದಾಗ ಈ ಕಾನೂನನ್ನು ಜಾರಿಗೊಳಿಸಲಾಗಿತ್ತು.