Sunday, 15th December 2024

ಫಿಲಿಪೀನ್ಸ್‌ನ ಮಾಜಿ ಅಧ್ಯಕ್ಷ ಬೆನಿಗ್ನೊ ನಿಧನ

ಮನಿಲಾ: ಫಿಲಿಪೀನ್ಸ್‌ನ ಮಾಜಿ ಅಧ್ಯಕ್ಷ ಬೆನಿಗ್ನೊ ಅಕ್ವಿನೊ III (61) ಮಂಗಳವಾರ ನಿಧನರಾದರು. 2010 ರಿಂದ 2016ರವರೆಗೆ ಅವರು ದ್ವೀಪರಾಷ್ಟ್ರದ ಅಧ್ಯಕ್ಷರಾಗಿದ್ದರು.

ಬೆನಿಗ್ನೊ ನಿಧನವನ್ನು ಅವರ ಸೋದರ ಸಂಬಂಧಿ ಮತ್ತು ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಆದರೆ ಕಾರಣ  ಬಹಿರಂಗ ಪಡಿಸಿಲ್ಲ. ಕುಟುಂಬದವರು ಅವರನ್ನು ಬೆಳಿಗ್ಗೆ ಮನಿಲಾದ ಆಸ್ಪತ್ರೆಗೆ ದಾಖಲಿಸಿದ್ದರು. ಅಕ್ವಿನೊ ಅವರು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ವಿನೊ ಅವರು  ವಿವಾಹಿತರಾಗಿದ್ದರು.

ಬೆನಿಗ್ನೊ ಅವರ ತಂದೆ ಸೆನ್‌ ಬೆನಿಗ್ನೊ ಅಕಿನೊ ಜೂನಿಯರ್‌ 1983ರಲ್ಲಿ ಸೇನೆಯ ವಶದಲ್ಲಿದ್ದ ವೇಳೆಯೇ ಮನಿಲಾ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹತ್ಯೆಯಾಗಿದ್ದರು. ವಿಮಾನ ನಿಲ್ದಾಣ ಈಗ ಅವರ ಹೆಸರನ್ನು ಹೊಂದಿದೆ. ತಾಯಿ ಆಗಿನ ಸರ್ವಾಧಿಕಾರಿ ಫರ್ಡಿನಾಂಡ್‌ ಮಾರ್ಕೊಸ್‌ ವಿರುದ್ಧ ದೇಶದಲ್ಲಿ ನಡೆದ ‘ಜನಶಕ್ತಿ’ ದಂಗೆಯ ನೇತೃತ್ವ ವಹಿಸಿದ್ದರು. ನಂತರ ದೇಶದ ಅಧ್ಯಕ್ಷೆಯೂ ಆಗಿದ್ದರು.

ಅಕ್ವಿನೊ ಕುಟುಂಬದವರೇ ಫಿಲಿಪೀನ್ಸ್‌ನಲ್ಲಿ ಹಲವು ವರ್ಷ ಆಡಳಿತ ನಡೆಸಿದ್ದಾರೆ. ಉತ್ತರ ಫಿಲಿಪೀನ್ಸ್‌ನ ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಅಕ್ವಿನೊ, ಭ್ರಷ್ಟಾಚಾರದ ಆರೋಪಗಳಿಂದ ದೂರವಾಗಿದ್ದರು.