ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

FBI: ಮಗನನ್ನು ಕೊಂದು ನಾಪತ್ತೆಯಾದ ಈಗ ಮಹಿಳೆ ಈಗ FIBಯ ಮೋಸ್ಟ್‌ ವಾಂಟೆಡ್‌ ಪಟ್ಟಿಗೆ

ಆರು ವರ್ಷದ ಮಗನ ಕೊಲೆ ಆರೋಪಿ ಹಾಗೂ ಭಾರತ ಮತ್ತು ಮೆಕ್ಸಿಕೋ ಜೊತೆ ಸಂಬಂಧ ಹೊಂದಿರುವ ಅಮೆರಿಕದ ನಾಗರಿಕ ಮಹಿಳೆ ಸಿಂಡಿ ರೊಡ್ರಿಗಸ್ ಸಿಂಗ್ (40) ಹೆಸರನ್ನು ಹತ್ತು ಮೋಸ್ಟ್ ವಾಂಟೆಡ್ ( Most Wanted list ) ಪಟ್ಟಿಗೆ ಸೇರಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( Federal Bureau of Investigation ) ಅಧಿಕಾರಿಗಳು ತಿಳಿಸಿದ್ದಾರೆ.

ಮಗನನ್ನು ಕೊಂದು ನಾಪತ್ತೆಯಾದ ಮಹಿಳೆ ಮೋಸ್ಟ್‌ ವಾಂಟೆಡ್ ಪಟ್ಟಿಗೆ

ಟೆಕ್ಸಾಸ್‌: ಆರು ವರ್ಷದ ಮಗನ ಕೊಲೆ ಆರೋಪಿ ಹಾಗೂ ಭಾರತ ಮತ್ತು ಮೆಕ್ಸಿಕೋ ಜೊತೆ ಸಂಬಂಧ ಹೊಂದಿರುವ ಅಮೆರಿಕದ ನಾಗರಿಕ ಮಹಿಳೆ ಸಿಂಡಿ ರೊಡ್ರಿಗಸ್ ಸಿಂಗ್ (40) (US citizen Cindy Rodriguez Singh) ಹೆಸರನ್ನು ಹತ್ತು ಮೋಸ್ಟ್ ವಾಂಟೆಡ್ ( Most Wanted list ) ಪಟ್ಟಿಗೆ ಸೇರಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( Federal Bureau of Investigation ) ಅಧಿಕಾರಿಗಳು ತಿಳಿಸಿದ್ದಾರೆ. ಸಿಂಡಿ ರೊಡ್ರಿಗಸ್ ಸಿಂಗ್ 2023ರಲ್ಲಿ ತನ್ನ ಮಗ ನೋಯೆಲ್ ಅಲ್ವಾರೆಜ್‌ನನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಳು. ಈ ಮಹಿಳೆಯ ಕುರಿತು ಮಾಹಿತಿ ನೀಡಿದವರಿಗೆ ಅಮೆರಿಕದ ಕಾನೂನು ಜಾರಿ ಸಂಸ್ಥೆಯು ಬಹುಮಾನವನ್ನು 25,000 ರಿಂದ 250,000 ಡಾಲರ್ ಗೆ ಹೆಚ್ಚಿಸಿದೆ.

2023 ಮಾರ್ಚ್ 22ರಂದು ಸಿಂಡಿ ರೊಡ್ರಿಗಸ್ ಸಿಂಗ್ ಅನ್ನು ಕೊನೆಯ ಬಾರಿಗೆ ಟೆಕ್ಸಾಸ್‌ನಲ್ಲಿ ನೋಡಲಾಗಿತ್ತು. ಆಗ ಆಕೆ ಪತಿ ಅರ್ಶ್ದೀಪ್ ಸಿಂಗ್ ತಮ್ಮ ಅವಳಿ ಮಕ್ಕಳೊಂದಿಗೆ ಭಾರತಕ್ಕೆ ಪ್ರಯಾಣ ನಡೆಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರ ಹಿರಿಯ ಮಗ ನೋಯೆಲ್ ಅಲ್ವಾರೆಜ್ ಕುಟುಂಬದೊಂದಿಗೆ ಇರಲಿಲ್ಲ. ಆತ ವಿಮಾನ ಹತ್ತಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಯೆಲ್ ಅಲ್ವಾರೆಜ್ ನಾಪತ್ತೆ ಮತ್ತು ಎವರ್‌ಮನ್‌ನಲ್ಲಿ ಆತನ ಅನುಮಾನಸ್ಮಾದ ಸಾವು ಉತ್ತರ ಟೆಕ್ಸಾಸ್‌ನಾದ್ಯಂತ ಸುದ್ದಿ ಮಾಡಿತ್ತು. ಬಳಿಕ ಇದೀಗ ಹತ್ತು ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಗೆ ಬಾಲಕನ ತಾಯಿ ಸಿಂಡಿ ರೊಡ್ರಿಗಸ್ ಸಿಂಗ್ ಳನ್ನು ಸೇರಿಸಿದೆ ಎಂದು ಎಫ್‌ಬಿಐ ಡಲ್ಲಾಸ್ ವಿಶೇಷ ಏಜೆಂಟ್ ಇನ್ ಚಾರ್ಜ್ ಆರ್. ಜೋಸೆಫ್ ರೋಥ್ರಾಕ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದರಿಂದ ಆಕೆಯ ಬಂಧನವಾಗುತ್ತದೆ ಮತ್ತು ಆಕೆಯ ಮೇಲಿರುವ ಆರೋಪಗಳಿಗೆ ಸರಿಯಾದ ಉತ್ತರ ನೀಡಲು ಆಕೆಯನ್ನು ಯುನೈಟೆಡ್ ಸ್ಟೇಟ್ಸ್‌ಗೆ ಕರೆತರಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ. 1985ರಲ್ಲಿ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಜನಿಸಿರುವ ಸಿಂಡಿ ರೊಡ್ರಿಗಸ್ ಸಿಂಗ್ 5'1" ರಿಂದ 5'3" ಎತ್ತರ, 120 ರಿಂದ 140 ಪೌಂಡ್‌ ತೂಕ, ಸಾಮಾನ್ಯ ಮೈಬಣ್ಣವನ್ನು ಹೊಂದಿದ್ದು, ಆಕೆಯ ಬೆನ್ನು, ಎರಡೂ ಕಾಲು, ಬಲಗೈ ಮೇಲೆ ಹಚ್ಚೆಗಳಿವೆ. ಆಕೆ ಕಂದು ಕಣ್ಣುಗಳು ಮತ್ತು ಕಂದು ಕೂದಲನ್ನು ಹೊಂದಿದ್ದಾಳೆ ಎಂದು ಅವರು ಹೇಳಿದ್ದಾರೆ.



ಸಿಂಡಿ ರೊಡ್ರಿಗಸ್ ಸಿಂಗ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಇದರ ಬಳಿಕ ಆಕೆಯ ಹಿರಿಯ ಮಗ ನೋಯಲ್ 2022ರ ಅಕ್ಟೋಬರ್ ಬಳಿಕ ನಾಪತ್ತೆಯಾಗಿದ್ದ. ಈ ಬಗ್ಗೆ 2023ರ ಮಾರ್ಚ್ 20ರಂದು ಟೆಕ್ಸಾಸ್ ಡಿಪಾರ್ಟ್ಮೆಂಟ್ ಆಫ್ ಫ್ಯಾಮಿಲಿ ಅಂಡ್ ಪ್ರೊಟೆಕ್ಟಿವ್ ಸರ್ವೀಸಸ್ ಕೋರಿಕೆ ಮೇರೆಗೆ ಎವರ್ಮನ್ ಪೊಲೀಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳು ಬಾಲಕನ ಕುರಿತು ತನಿಖೆಗೆ ಪ್ರಾರಂಭಿಸಿದರು.

ಆಗ ಸಿಂಗ್ ಬಾಲಕ ತನ್ನ ಜೈವಿಕ ತಂದೆಯೊಂದಿಗೆ ಮೆಕ್ಸಿಕೋದಲ್ಲಿ 2022ರ ನವೆಂಬರ್ ನಿಂದ ಇರುವುದಾಗಿ ಹೇಳಿದ್ದಳು. ಆಕೆ ತನ್ನ ಮಗನಿಗೆ ದೆವ್ವ ಹಿಡಿದಿದೆ ಎಂದು ನಂಬಿದ್ದಳು. ಮಾಹಿತಿ ಪ್ರಕಾರ ನೋಯೆಲ್ ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಅಗತ್ಯವಿರುವ ಆಮ್ಲಜನಕ ಚಿಕಿತ್ಸೆ ಸೇರಿದಂತೆ ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದ. ಆತನಿಗೆ ಆರೈಕೆಯ ಅಗತ್ಯವಿತ್ತು. ಇದರಿಂದ ಸಿಂಗ್ ಗೆ ಕಷ್ಟವಾಗುತ್ತಿತ್ತು. ಹೀಗಾಗಿ ಆಕೆ ಅವನಿಗೆ ಆಹಾರ ಮತ್ತು ನೀರನ್ನು ಸರಿಯಾಗಿ ನೀಡುತ್ತಿರಲಿಲ್ಲ. ತೀವ್ರವಾಗಿ ನಿಂದಿಸುತ್ತಿದ್ದಳು. ಒಂದು ಬರಿ ಆತ ನೀರು ಕೇಳಿದಾಗ ಚೆನ್ನಾಗಿ ಹೊಡೆದಿದ್ದಳು ಎನ್ನಲಾಗಿದೆ.

2023ರ ಅಕ್ಟೋಬರ್ 31ರಂದು ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಟ್ಯಾರಂಟ್ ಕೌಂಟಿಯ ಜಿಲ್ಲಾ ನ್ಯಾಯಾಲಯದಲ್ಲಿ ಸಿಂಡಿ ರೊಡ್ರಿಗಸ್ ಸಿಂಗ್ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆಕೆ ಹೊರದೇಶಗಳಿಗೆ ಹೋಗದಂತೆ ತಡೆಯಲು ಫೆಡರಲ್ ಬಂಧನ ವಾರಂಟ್ ಅನ್ನು ಹೊರಡಿಸಿತ್ತು. ಆದರೆ ಬಳಿಕ ಸಿಂಗ್ ನಾಪತ್ತೆಯಾಗಿದ್ದಾಳೆ.

ಇದನ್ನೂ ಓದಿ: US Tariff: ದೊಡ್ಡಣ್ಣನ ವ್ಯಾಪಾರ ಸಮರ ಮತ್ತೆ ಶುರು! ಭಾರತ, ಚೀನಾ, ರಷ್ಯಾದ ಮೇಲೆ ಅಮೆರಿಕದಿಂದ ಶೇ.500 ರಷ್ಟು ಸುಂಕ?

ಸಿಂಗ್ ಕುರಿತು ಯಾವುದೇ ಮಾಹಿತಿ ಇದ್ದರೂ ಟೋಲ್-ಫ್ರೀ ಸಹಾಯವಾಣಿಗೆ ಕರೆ ಮಾಡಿ ತಿಳಿಸುವಂತೆ ಅಥವಾ ಸ್ಥಳೀಯ ಎಫ್‌ಬಿಐ ಕಚೇರಿಗೆ ಮಾಹಿತಿ ನೀಡುವಂತೆ ಎಫ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.