Pakistani Artist: ಪಾಕ್ ನಟರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಮತ್ತೆ ಆಕ್ಟೀವ್!
Pakistani Artistes: ಪಾಕಿಸ್ತಾನದ ಕೆಲ ನಟ ನಟಿಯರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದ ಬಳಕೆದಾರರಿಗೆ ಕಾಣಿಸುತ್ತಿದ್ದು, ನಟರಾದ ಮಾವ್ರಾ ಹೊಕೇನ್, ಸಬಾ ಕಮರ್, ಆಹದ್ ರಾಜಾ ಮಿರ್ , ಯುಮ್ನಾ ಜೈದಿ ಮತ್ತು ದಾನಿಶ್ ತೈಮೂರ್ ಅವರ ಇನ್‌ಸ್ಟಾಗ್ರಾಮ್ ಖಾತೆಗಳು ಇನ್‌ಸ್ಟಾಗ್ರಾಮ್ ಅಲ್ಲಿ ಅವರ ಖಾತೆಗಳು ಕಾಣಿಸುತ್ತಿವೆ.

ಪಾಕಿಸ್ತಾನದ ನಟಿಯರು

ಮುಂಬೈ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು (Pahalgam Terror Attack) ನಡೆಸಿದ ಭಯೋತ್ಪಾದಕ ದಾಳಿಯ ವಿರುದ್ಧ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಪಾಕಿಸ್ತಾನದ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿತ್ತು. ಭಾರತ ಇದಕ್ಕೆ ಪ್ರತೀಕಾರ ತೀರಿಸಲೇಬೇಕು ಎಂಬ ಕೂಗೂ ಎಲ್ಲೆಡೆ ಮೊಳಗಿತ್ತು. ಆ ಬೆನ್ನಲ್ಲೇ ಪಾಕ್‌ಗೆ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಮೂಲಕ ಪ್ರತ್ಯುತ್ತರ ನೀಡಿತ್ತು. ಸಾಲದಕ್ಕೆ ಇನ್ನೊಂದು ಭಾರತದಲ್ಲಿ ಹನಿಯಾ ಆಮಿರ್ ಮತ್ತು ಮಹಿರಾ ಖಾನ್ ಸೇರಿದಂತೆ ಹಲವಾರು ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳನ್ನು(Pakistani influencers Banned in India) ಬ್ಯಾನ್ ಮಾಡಿತ್ತು.
ಆದರೆ ಇದೀಗ ಅಚ್ಚರಿ ಎಂಬಂತೆ ಪಾಕಿಸ್ತಾನದ (Pakistan) ಕೆಲ ನಟ ನಟಿಯರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದ ಬಳಕೆದಾರರಿಗೆ ಕಾಣಿಸುತ್ತಿದ್ದು, ನಟರಾದ ಮಾವ್ರಾ ಹೊಕೇನ್ (Mawra Hocane), ಸಬಾ ಕಮರ್ (Saba Qamar), ಆಹದ್ ರಾಜಾ ಮಿರ್ (Ahad Raza Mir), ಯುಮ್ನಾ ಜೈದಿ ಮತ್ತು ದಾನಿಶ್ ತೈಮೂರ್ ಅವರ ಇನ್‌ಸ್ಟಾಗ್ರಾಮ್ ಖಾತೆಗಳು (Instagram Accounts) ಇನ್‌ಸ್ಟಾಗ್ರಾಮ್ ಅಲ್ಲಿ ಅವರ ಖಾತೆಗಳು ಕಾಣಿಸುತ್ತಿವೆ.
ಆದರೆ ಫವಾದ್ ಖಾನ್, ಮಾಹಿರಾ ಖಾನ್, ಹನಿಯಾ ಆಮಿರ್ ಮತ್ತು ಆತಿಫ್ ಅಸ್ಲಾಂ ಸೇರಿ ಇತರ ಪಾಕ್ ನಟರ ಖಾತೆಗಳ ಮೇಲೆ ನಿಷೇಧ ಮುಂದುವರೆದಿದ್ದು, ಭಾರತದಲ್ಲಿ ಹನಿಯಾ ಆಮಿರ್ ಮತ್ತು ಮಹಿರಾ ಖಾನ್ ಸೇರಿದಂತೆ ಪಾಕಿಸ್ತಾನದ ಹಲವಾರು ಪ್ರಸಿದ್ಧ ನಟ-ನಟಿಯರ ಇನ್‌ಸ್ಟಾಗ್ರಾಮ್ ಖಾತೆಗಳು ಇನ್ನೂ ನಿಷ್ಕ್ರಿಯಗೊಂಡೇ ಇದೆ.
ಈ ಸುದ್ದಿಯನ್ನು ಓದಿ: Viral Video: ಹಾಸ್ಟೆಲ್ ಊಟದಲ್ಲಿ ಗೃಹ ಸಚಿವೆ ಪ್ಲೇಟ್‌ನಲ್ಲಿ ಸಿಕ್ತು ಜಿರಳೆ; ವಾರ್ಡನ್ ಅಮಾನತು
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ನಾಗರಿಕರು ಮೃತಪಟ್ಟಿದ್ದರಿಂದ, ಪಾಕಿಸ್ತಾನದ ನಟರು ಸೇರಿ ಹಲವರ ಇನ್‌ಸ್ಟಾಗ್ರಾಮ್ ಖಾತೆಗಳ ಮೇಲೆ ಭಾರತದಲ್ಲಿ ನಿಷೇಧ ಹೇರಲಾಗಿತ್ತು. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹೊತ್ತಿತ್ತು.
ಈ ದಾಳಿಯ ಪ್ರತೀಕಾರವಾಗಿ, ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಆರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿನ 9 ಭಯೋತ್ಪಾದಕರ ತಾಣಗಳ ಮೇಲೆ ದಾಳಿ ಮಾಡಿದ್ದರಿಂದ ಗಡಿಯಾದ್ಯಂತ ಯುದ್ಧದಂತಹ ಸ್ಥಿತಿ ನಿರ್ಮಾಣವಾಗಿತ್ತು. ನಟಿ ಮಾವ್ರಾ ಹೊಕೇನ್ 2016ರಲ್ಲಿ ಹರ್ಷವರ್ಧನ್ ರಾಣೆ ಜೊತೆಗಿನ 'ಸನಮ್ ತೇರಿ ಕಸಮ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ, ಚಿತ್ರದ ಸೀಕ್ವೆಲ್‌ನಿಂದ ಆಕೆಯನ್ನು ಕೈಬಿಡಲಾಯಿತು. ರಾಣೆ, ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ, ನನ್ನ ದೇಶದ ಬಗ್ಗೆ ಮಾಡಲಾದ ಕಾಮೆಂಟ್‌ಗಳಿಂದಾಗಿ 'ಸನಮ್ ತೇರಿ ಕಸಮ್ 2'ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ, ಪಂಜಾಬಿ ನಟ ಮತ್ತು ಗಾಯಕ ದಿಲ್‌ಜಿತ್ ದೋಸಾಂಜ್, ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಜೊತೆಗೆ 'ಸರ್ದಾರ್ ಜಿ 3' ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ತೀವ್ರ ಟೀಕೆಗೆ ಒಳಗಾಗಿದ್ದರು. ಈ ವಿವಾದದಿಂದಾಗಿ ಚಿತ್ರವು ಭಾರತದಲ್ಲಿ ಬಿಡುಗಡೆಯಾಗಿಲ್ಲ.