Friday, 22nd November 2024

ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ

ಲಕ್ಷದ್ವೀಪ: ದೇಶದಲ್ಲಿ ಕೊರೊನಾ ವೈರಸ್​ ಹರಡಿ ಸುಮಾರು 1 ವರ್ಷಗಳ ಬಳಿಕ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ.

ಇಂಡಿಯಾ ರಿಸರ್ವ್​ ಬೆಟಾಲಿಯನ್​​ಗೆ ಸೇರಿದ ಈ ವ್ಯಕ್ತಿ ಕೊಚ್ಚಿಯಿಂದ ಹಡಗಿನ ಮೂಲಕ ಕವರಟ್ಟಿಗೆ ತೆರಳಿದ್ದರು ಎನ್ನಲಾಗಿದೆ. ಇವರ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಆದರೆ ದ್ವೀಪಗಳ ನಿವಾಸಿ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಚ್ಚಿಯಿಂದ ಆಗಮಿಸುವವರಿಗೆ ಕಡ್ಡಾಯವಾದ ಕ್ವಾರಂಟೈನ್​​ ತಪ್ಪಿಸುವ ಮೂಲಕ ಲಕ್ಷದ್ವೀಪ ಆಡಳಿತವು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಪರಿಷ್ಕರಿಸಿದ ಎರಡು ವಾರಗಳ ನಂತರ ಈ ಪ್ರಕರಣ ವರದಿಯಾಗಿದೆ.

ದ್ವೀಪಗಳು ಇಲ್ಲಿಯವರೆಗೆ ಒಂದೇ ಧನಾತ್ಮಕ ಕೋವಿಡ್ -19 ಪ್ರಕರಣವನ್ನು ವರದಿ ಮಾಡಿಲ್ಲ. ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್​ ಮಾಡಲು ನಿರ್ದೇಶಿಸಲಾಗಿದೆ.