Sunday, 15th December 2024

ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆ ಪ್ರಮಾಣ ವಚನ ಸ್ವೀಕಾರ

ದಾರ್‌ ಎಸ್‌ ಸಲಾಂ: ಸಮಿಯಾ ಸುಲುಹು ಹಸನ್ ಅವರು ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಮಿಯಾ ಸುಲುಹು ಹಸನ್ ಅವರು ಸಂಪುಟ ಸದಸ್ಯರು ಮತ್ತು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಿ, ಬಲಗೈಯಲ್ಲಿ ಕುರಾನ್‌ ಹಿಡಿದು ತಾಂಜೇನಿಯಾದ ಅಧ್ಯಕ್ಷೆಯಾಗಿ ‍ಅಧಿಕಾರ ಸ್ವೀಕರಿಸಿದರು.

ಮಾಜಿ ಅಧ್ಯಕ್ಷರುಗಳಾದ ಆಲಿ ಹಸನ್‌ ಮ್ವಿನಿ, ಜಕಾಯ ಕಿಕ್ವೆತೆ ಮತ್ತು ಅಬೀದ್ ಕರುಮೆ ಈ ವೇಳೆ ಉಪಸ್ಥಿತರಿದ್ದರು.