ಗಾಜಾ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಸೋಮವಾರ 10 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ.
ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರರಿಂದ ದಾಳಿಯಾದ ಬಳಿಕ ತಿರುಗಿ ಬಿದ್ದ ಇಸ್ರೇಲ್ ಪ್ರತಿ ದಾಳಿ ಮಾಡುತ್ತಿದ್ದು, ಗಾಜಾ ಪಟ್ಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಮತ್ತೊಂದು ಮಾರಕ ದಾಳಿಗೆ ಇಸ್ರೇಲ್ ಸಜ್ಜಾಗಿವೆ.
ಇಸ್ರೇಲಿ ಗಡಿ ಪಟ್ಟಣಗಳ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ ಹಮಾಸ್ ಉಗ್ರಗಾಮಿಗಳ ಬೆನ್ನಟ್ಟಲು ಸೈನಿಕರು ಗಾಜಾ ಪಟ್ಟಿಗೆ ತೆರಳಲು ಸಿದ್ಧವಾಗು ತ್ತಿದ್ದಂತೆ ಇಸ್ರೇಲಿ ಸೇನೆಯು “ಹಮಾಸ್ ಅನ್ನು ನಾಶಮಾಡಲು” ಪ್ರತಿಜ್ಞೆ ಮಾಡಿದೆ.
ಗಾಜಾ ಮೇಲೆ ಆಕ್ರಮಣ ಮುಂದುವರೆಸಲು ಸೈನ್ಯ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಹಮಾಸ್ ನಿಯಂತ್ರಿತ ಗಾಜಾದ ಮೇಲೆ ವಾಯು ದಾಳಿ ಮಾಡಿದ್ದ ಇಸ್ರೇಲ್, ಪ್ರಮುಖ ಕಟ್ಟಡ ಗಳನ್ನೇ ನಿರ್ನಾಮ ಮಾಡಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮಕ್ಕೆ ಇದು ಸಮಯವೇ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಹಮಾಸ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇಸ್ರೇಲಿಗಳು ಮತ್ತು ಇಸ್ರೇಲಿ ಪ್ರತಿದಾಳಿಯಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ಟೀನಿಯಾದ ನಡುವೆ ಮೂಲಭೂತ ವ್ಯತ್ಯಾಸ ಇದೆ ಎಂದು ಹೇಳಿದರು.
ಹತ್ಯಾಕಾಂಡ ನಡೆಸಿದ ಜನರ ಗುಂಪನ್ನು ನಾಶ ಮಾಡಲು ಇಸ್ರೇಲ್ ಕೆಲಸ ಮಾಡುತ್ತಿದೆ. ಹಮಾಸ್ ಅವರನ್ನು ಬಿಡಬಾರದು, ಹಮಾಸ್‌ಗಳದ್ದು ಹೇಡಿಗಳ ಗುಂಪು, ಅವರು ನಾಗರಿಕೆ ಹಿಂದೆ ಅಡಗಿಕೊಳ್ಳುತ್ತಿದ್ದಾರೆ, ಅವರ ಪ್ರಧಾನ ಕಚೇರಿ, ಕಟ್ಟಡಗಳಲ್ಲಿ ನಾಗರಿಕರನ್ನು ಬಂಧಿಸಿ ದಾಳಿಯಿಂದ ತಪ್ಪಿಸಿಕೊಳ್ಳಲು ನೋಡಿದರು, ಮುಗ್ದ ನಾಗರಿಕರ ಹತ್ಯೆಯನ್ನು ತಪ್ಪಿಸಲು ಇಸ್ರೇಲ್ ಕೆಲಸ ಮಾಡಲಿದೆ ಎಂದರು.