Sunday, 15th December 2024

ಕೊರೊನಾ ವೈರಸ್​ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರಿಗೆ ಕೊರೊನಾ ಸೋಂಕು

ಇಸ್ಲಾಮಾಬಾದ್‌: ಪಾಕಿಸ್ತಾನದ ಯೋಜನಾ ಮಂತ್ರಿ ಹಾಗೂ ಕೊರೊನಾ ವೈರಸ್​ ನಿಯಂತ್ರಣ ಸಂಸ್ಥೆ ಮುಖ್ಯಸ್ಥರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಪಾಕಿಸ್ತಾನ ಯೋಜನಾಭಿವೃದ್ಧಿ ಹಾಗೂ ವಿಶೇಷ ಉಪಕ್ರಮಗಳ ಸಚಿವ ಅಸಾದ್​ ಉಮರ್​, ನನ್ನ ಕೋವಿಡ್ ಪರೀಕ್ಷಾ ವರದಿ ಕೈ ಸೇರಿದ್ದು, ಸೋಂಕಿಗೆ ಒಳಗಾಗಿದ್ದೇನೆ. ಮನೆಯಲ್ಲಿ ಪ್ರತ್ಯೇಕವಾಗಿ ಇರಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್​ಗೆ ತುತ್ತಾದ ತೀರಾ ಇತ್ತೀಚಿನ ಪಾಕಿಸ್ತಾನಿ ರಾಜಕಾರಣಿ ಇವರು. ಸಿಂಧ್​ ಗವರ್ನರ್​ ಇಮ್ರಾನ್​ ಇಸ್ಮಾಯಿಲ್​, ಸಿಂಧ್​ ಸಿಎಂ ಮುರಾದ್​ ಅಲಿ ಶಾ, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್​ ಅಸದ್​ ಖೈಸರ್​, ವಿದೇಶಾಂಗ ಸಚಿವ ಶಾ ಮಹಮೂದ್​ ಖುರೇಷಿ ಸೇರಿದಂತೆ ಅನೇಕರು ಈವರೆಗೆ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ.