Friday, 22nd November 2024

ಹೋಟೆಲ್ ದಾಳಿ ಪ್ರಕರಣ: ಮೂವರು ದಾಳಿಕೋರರ ಹತ್ಯೆ

ಕಾಬೂಲ್‌: ಚೀನಾ ಸೇರಿದಂತೆ ವಿದೇಶಿ ಪ್ರವಾಸಿಗರು ವಾಸ್ತವ್ಯ ಹೂಡಿದ್ದ ಅಫ್ಘಾನಿ ಸ್ತಾನದ ರಾಜಧಾನಿ ಕಾಬೂಲ್‌ನ ಹೋಟೆಲ್ ಮೇಲೆ ದಾಳಿ ನಡೆಸಿದ ಮೂವರು ದಾಳಿಕೋರರನ್ನು ಹತ್ಯೆ ಮಾಡಲಾಗಿದೆ.

ತಪ್ಪಿಸಿಕೊಳ್ಳಲು ಕಿಟಕಿಯಿಂದ ಜಿಗಿದ ಇಬ್ಬರು ವಿದೇಶಿ ನಿವಾಸಿಗಳು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಸ್ಫೋಟಗಳು ಮತ್ತು ಗುಂಡಿನ ದಾಳಿಯ ಫೋಟೊಗಳನ್ನು ನಿವಾಸಿಗಳು ಹಂಚಿ ಕೊಂಡಿ ದ್ದಾರೆ. ದಾಳಿಯು ಹಲವಾರು ಗಂಟೆಗಳ ಕಾಲ ನಡೆಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಲಿಬಾನ್ ಪಡೆಗಳು ಪ್ರದೇಶಕ್ಕೆ ಧಾವಿಸಿ ಸ್ಥಳಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಿವೆ ಎಂದು ಪೊಲೀಸ್ ಮುಖ್ಯ ವಕ್ತಾರ ಜದ್ರಾನ್ ಹೇಳಿದ್ದಾರೆ.

ದಾಳಿಯ ಹೊಣೆಯನ್ನು ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ. ಇದು ಇಸ್ಲಾಮಿಕ್ ಸ್ಟೇಟ್ ಗುಂಪಿನ ಪ್ರಾದೇಶಿಕ ಅಂಗಸಂಸ್ಥೆ ಮತ್ತು ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್‌ನ ಪ್ರತಿಸ್ಪರ್ಧಿ ಯಾಗಿದ್ದು, ಕಳೆದ ವರ್ಷ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ತನ್ನ ದಾಳಿಯನ್ನು ಹೆಚ್ಚಿಸಿದೆ.