ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯಾದ ಕೇಂದ್ರ ಭಾಗದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿರುವ ತೀವ್ರ ನಿಗಾ ಘಟಕಗಳಲ್ಲಿನ ಹಾಸಿಗೆಗಳು ಭರ್ತಿಯಾಗಿವೆ’ ಎಂದು ಸ್ಥಳೀಯ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಪ್ರಾಥಮಿಕ ಹಂತದ ಲಸಿಕೆ ಪಡೆಯದವರಲ್ಲಿ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ಗುರುವಾರದ ವೇಳೆಗೆ ಒಟ್ಟು 8,630 ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಫ್ರೆಸ್ನೊ ಕೌಂಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೃಢಪಡಿಸಿದ ಮತ್ತು ಶಂಕಿತ ಕರೋನಾ ವೈರಸ್ ರೋಗಿಗಳ ಸಂಖ್ಯೆ ನಾಲ್ಕು ವಾರಗಳ ಹಿಂದೆ ಇದ್ದ ಸಂಖ್ಯೆಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ’ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
8 ಕೌಂಟಿ ಸ್ಯಾನ್ ಜೋಕ್ವಿನ್ ವ್ಯಾಲಿ ಪ್ರದೇಶದಲ್ಲಿನ ಆಸ್ಪತ್ರೆಗಳಲ್ಲಿ ವಯಸ್ಕರಿಗಾಗಿ ಶೇ.10ರಷ್ಟು ಐಸಿಯು ಹಾಸಿಗೆಗಳಿವೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾ ಗಿದ್ದು, ಸದ್ಯಕ್ಕೆ ಕೌಂಟಿ ಪ್ರದೇಶದಲ್ಲಿನ ಆಸ್ಪತ್ರೆಗಳಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಲ್ಲಿ ಕ್ಯಾಲಿಫೋರ್ನಿಯಾದ ಆಸ್ಪತ್ರೆ ಗಳಿಗೆ ರೋಗಿಗಳನ್ನು ವರ್ಗಾಯಿಸಲಾಗುವುದು’ ಎಂದು ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.