ಯುರೋಪಿಯನ್ ರಾಷ್ಟ್ರವಾದ ಸ್ಲೋವಾಕಿಯಾದಲ್ಲಿ (slovakia) ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚು ಮುಸ್ಲಿಮರಿದ್ದರೂ (Islam in slovakia) ಈ ದೇಶದಲ್ಲಿ ಒಂದೇ ಒಂದು ಮಸೀದಿ ಇಲ್ಲ. ಅನೇಕ ಬಾರಿ ಮಸೀದಿ (mosque) ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದರೂ ಇಲ್ಲಿನ ಸರ್ಕಾರ ಅದಕ್ಕೆ ಅನುಮತಿಯನ್ನೇ ನೀಡಿಲ್ಲ.
2000ರ ಇಸವಿಯಿಂದಲೇ ದೇಶದಲ್ಲಿ ಮಸೀದಿ ನಿರ್ಮಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇ. 0.1ರಷ್ಟಿರುವ ಮುಸ್ಲಿಂ ಸಮುದಾಯದ (Muslim community) ಬೇಡಿಕೆಗೆ ಈವರೆಗೂ ಸರ್ಕಾರ ಮನ್ನಣೆಯನ್ನೇ ನೀಡಿಲ್ಲ. 2000ರ ಇಸವಿಯಲ್ಲಿ ದೇಶದ ರಾಜಧಾನಿಯಲ್ಲಿ ಇಸ್ಲಾಮಿಕ್ ಕೇಂದ್ರ ನಿರ್ಮಾಣದ ಬಗ್ಗೆ ವಿವಾದ ಉಂಟಾಗಿತ್ತು. ಬಳಿಕ 2016ರ ನವೆಂಬರ್ ತಿಂಗಳಲ್ಲಿ ಸ್ಲೋವಾಕಿಯಾ ದೇಶದಲ್ಲಿ ಧರ್ಮವಾಗಿ ಅಧಿಕೃತ ಸ್ಥಾನಮಾನವನ್ನು ಪಡೆಯುವುದರಿಂದ ಇಸ್ಲಾಂ ಧರ್ಮವನ್ನು ನಿರ್ಬಂಧಿಸಲು ಶಾಸನವನ್ನೇ ರಚಿಸಿದೆ.
ಈ ಕಾನೂನಿನ ಪ್ರಕಾರ ಕನಿಷ್ಠ 50,000 ಅನುಯಾಯಿಗಳಿರುವ ಧಾರ್ಮಿಕ ಪಂಗಡಗಳಿಗೆ ಮಾತ್ರ ರಾಜ್ಯದ ಹಕ್ಕುಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾದರೂ ದೇಶದ ಸಂಸ್ಕೃತಿ ಸಚಿವಾಲಯವು ಕಾನೂನು ಬದಲಾವಣೆಗೆ ನಿರಾಕರಿಸಿದೆ.
ಯುರೋಪಿಯನ್ ರಾಷ್ಟ್ರವಾದ ಸ್ಲೋವಾಕಿಯಾದ ಒಟ್ಟು ಜನಸಂಖ್ಯೆ ಸುಮಾರು 5 ಮಿಲಿಯನ್ ಆಗಿದ್ದು, ಇದರಲ್ಲಿ ಕ್ಯಾಥೋಲಿಕ್ ಗಳು ಹೆಚ್ಚಾಗಿದ್ದಾರೆ. ದೇಶದಲ್ಲಿ ಒಟ್ಟು ಮುಸ್ಲಿಮರ ಸಂಖ್ಯೆ 6000ಕ್ಕಿಂತ ಕಡಿಮೆ ಇದ್ದು, ಇದರಲ್ಲಿ ವಲಸಿಗರೇ ಹೆಚ್ಚಾಗಿದ್ದಾರೆ.
ಸ್ಲೋವಾಕಿಯಾದಲ್ಲಿ 21 ಧಾರ್ಮಿಕ ಸಮುದಾಯಗಳನ್ನು ಗುರುತಿಸಲಾಗಿದೆ. ಇದರಲ್ಲಿ 18 ನೋಂದಾಯಿಸಲ್ಪಟ್ಟಿದೆ. ಇನ್ನು ಮೂರು ಧರ್ಮಗಳನ್ನು ನೋಂದಾಯಿಸಲಾಗಿಲ್ಲ. ಇದರಲ್ಲಿ ಇಸ್ಲಾಂ, ಬೌದ್ಧ ಮತ್ತು ಹಿಂದೂ ಧರ್ಮ ಕೂಡ ಸೇರಿದೆ. ಜನಗಣತಿ ವೇಳೆ ಇಲ್ಲಿರುವ ಅಲ್ಪ ಸಂಖ್ಯಾತ ಸಮುದಾಯದವರು ಧರ್ಮವನ್ನು “ಇತರರು” ಎಂದು ಆಯ್ಕೆ ಮಾಡಬೇಕಿದೆ.
Nadaprabhu Kempegowda: ಲಂಡನ್‌ನಲ್ಲಿ ಅದ್ಧೂರಿಯಾಗಿ ಜರುಗಿತು ಕೆಂಪೇಗೌಡರ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಭ್ರಮ
ಮುಸ್ಲಿಂ ಸಮುದಾಯಕ್ಕೆ ಧರ್ಮದ ಮಾನ್ಯತೆ ಸಿಗದೇ ಇರುವುದರಿಂದ ಇಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಇಲ್ಲಿನ ಮುಸ್ಲಿಂ ಸಮುದಾಯ. ತಮ್ಮನ್ನು ತಾವು ಗುರುತಿಸಲು ಕಷ್ಟವಾಗುತ್ತದೆ, ಮದುವೆ ಸೇರಿದಂತೆ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ, ಪ್ರಾರ್ಥನೆ ಸಲ್ಲಿಸಲು ತೊಂದರೆಯಾಗುತ್ತದೆ ಮಾತ್ರವಲ್ಲದೆ ಸರ್ಕಾರದಿಂದ ಸಮುದಾಯಕ್ಕೆ ಯಾವುದೇ ಸವಲತ್ತುಗಳು ದೊರೆಯುವುದಿಲ್ಲ ಎನ್ನುತ್ತಾರೆ.