Tuesday, 7th January 2025

Israel Hamas War: ಹಮಾಸ್‌ ಉಗ್ರರ ಸೆರೆಯಲ್ಲಿರುವ ಮಹಿಳಾ ಯೋಧರ ಘೋರ ಸ್ಥಿತಿಯನ್ನೊಮ್ಮೆ ನೋಡಿ-ಶಾಕಿಂಗ್‌ ವಿಡಿಯೊ ಭಾರೀ ವೈರಲ್‌

Israel Hamas War

ಜೆರುಸಲೇಂ : ಹಮಾಸ್‌ನ ಉಗ್ರರು ಮತ್ತೆ ತಮ್ಮ ಸೆರೆಯಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ವೀಡಿಯೊವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸೆರೆಯಲ್ಲಿದ್ದ 19 ವರ್ಷದ ಇಸ್ರೇಲಿ ಮಹಿಳಾ ಯೋಧರೊಬ್ಬರ ವಿಡಿಯೋ ಇದ್ದು, (Viral Video) ಅವರು ತನ್ನನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ (Israel Hamas War). ಇದೀಗ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

2023 ರ ಅಕ್ಟೋಬರ್‌ 7 ರಂದು ಹಮಾಸ್‌ ಉಗ್ರರು (Hamas Terrorists) ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದರು. ಇಸ್ರೇಲ್ ಡಿಫೆನ್ಸ್ ಫೋರ್ಸಸ್ (Israel defence Force) ನ ಮಹಿಳಾ ಯೋಧರಾಗಿರುವ  19 ವರ್ಷದ ಸೈನಿಕ ಲಿರಿ ಅಲ್ಬಾಗ್ ಕರ್ತವ್ಯದಲ್ಲಿದ್ದರು. ಆಗ ಹಮಾಸ್‌ ಉಗ್ರರು ದಾಳಿ ನಡೆಸಿ ಲಿರಿ ಅಲ್ಬಾಗ್ ಸೇರಿ ಇತರ ಆರು ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಇದೀಗ ಅವರು ಮಾತನಾಡಿರುವ ವಿಡಿಯೋವನ್ನು ಹಮಾಸ್‌ ಬಿಡುಗಡೆ ಮಾಡಿದೆ.

ಮೂರೂವರೆ ನಿಮಿಷಗಳ ಅವಧಿಯ ವೀಡಿಯೊದಲ್ಲಿ, ಅಲ್ಬಾಗ್ ಹೆಬ್ರಿ ಭಾಷೆಯಲ್ಲಿ ಮಾತನಾಡಿದ್ದು,  ಇಸ್ರೇಲಿ ಸರ್ಕಾರವು ತನ್ನನ್ನು ಮತ್ತು ಇತರ ಒತ್ತೆಯಾಳುಗಳನ್ನು ಮರೆತಿದೆ ಎಂದು ಅನ್ನಿಸುತ್ತಿದೆ. “ನನಗೆ ಕೇವಲ 19 ವರ್ಷ. ನನ್ನ ಇಡೀ ಜೀವನ ನನ್ನ ಮುಂದೆ ಇದೆ. ಆದರೆ ಈಗ ನನ್ನ ಇಡೀ ಜೀವನಕ್ಕೆ ವಿರಾಮ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಡಿಯೋ ಬಿಡುಗಡೆಯಾದ ನಂತರ ಪ್ರತಿಕ್ರಿಯಿಸಿರುವ ಅಲ್ಬಾಗ್ ಅವರ ಕುಟುಂಬ ಇದನ್ನು ನೋಡಿದ ನಂತರ ನಮ್ಮ ಹೃದಯಕ್ಕೆ ತುಂಬಾ ನೋವಾಗಿದೆ. ಆಕೆಯ ತೀವ್ರ ಮಾನಸಿಕ ಯಾತನೆಯು ಸ್ಪಷ್ಟವಾಗಿ ಕಾಣಿಸುತ್ತಿದೆ. ನಾವು ಪ್ರಧಾನ ಮಂತ್ರಿ, ವಿಶ್ವ ನಾಯಕರು ಮತ್ತು ಎಲ್ಲಾ ನಿರ್ಧಾರ ತೆಗೆದುಕೊಳ್ಳುವವರಿಗೆ ಮನವಿ ಮಾಡುತ್ತೇವೆ. ಅಲ್ಲಿ ಇರುವವರನ್ನು ನಿಮ್ಮ ಸ್ವಂತ ಮಕ್ಕಳಂತೆ ನೋಡಿ ಎಂದು ವಿನಂತಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಂಧಿತರನ್ನು ಕರೆತರಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Randhir Jaiswal: ಇಸ್ರೇಲ್‌ನಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ; ವಿದೇಶಾಂಗ ಸಚಿವಾಲಯ

Leave a Reply

Your email address will not be published. Required fields are marked *