Wednesday, 8th January 2025

Israel-Hamas: ಹಮಾಸ್ ಮಾಜಿ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್​ ಹತ್ಯೆ ಮಾಡಿದ್ದು ನಾವೇ! ಹೊಣೆ ಹೊತ್ತುಕೊಂಡ ಇಸ್ರೇಲ್

Israel-Hamas

ಜೆರುಸೆಲೆಂ: ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ (Israel Katz) ಅವರು ಜುಲೈನಲ್ಲಿ ಇರಾನ್‌ನಲ್ಲಿ, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್‌ನನ್ನು (Ismail Haniyeh)ಕೊಂದಿದ್ದು ಇಸ್ರೇಲ್ ಎಂದು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದೇ ಸಮಯದಲ್ಲಿ ಯೆಮೆನ್‌ನಲ್ಲಿ ಹೌತಿ ಬಂಡುಕೋರರ ನಾಯಕತ್ವವನ್ನು ಶಿರಚ್ಛೇದನ ಮಾಡುವುದಾಗಿ ಎಚ್ಚರಿಸಿದ್ದಾರೆ. (Israel-Hamas)

ಈ ಬಗ್ಗೆ ಮಾತನಾಡಿದ ಅವರು ನಾವು ಹುತಿಗಳ ಮೇಲೆ ಬಲವಾಗಿ ದಾಳಿ ನಡೆಸಲಿದ್ದೇವೆ ಮತ್ತು ಅವರ ನಾಯಕತ್ವವನ್ನು ಶಿರಚ್ಛೇದ ಮಾಡುತ್ತೇವೆ ಎಂದರು. ನಾವು ಟೆಹ್ರಾನ್, ಗಾಜಾ ಮತ್ತು ಲೆಬನಾನ್‌ನಲ್ಲಿ ಹನಿಯೆಹ್‌, ಸಿನ್ವಾರ್ ಮತ್ತು ನಸ್ರಲ್ಲಾನ ಹತ್ಯೆ ಮಾಡಿದಂತೆ ಹೊಡೆದಾಹ್‌ ಮತ್ತು ಸನಾದಲ್ಲಿ ಮಾಡುತ್ತೇವೆ ಎಂದು ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಯೆಮೆನ್‌ನಲ್ಲಿನ ಇರಾನ್ ಬೆಂಬಲಿತ ಗುಂಪು ಇಸ್ರೇಲ್‌ನ ಮೇಲೆ ನೌಕಾ ದಿಗ್ಬಂಧನ ಮಾಡಲು ಒಂದು ವರ್ಷಕ್ಕೂ ಅಧಿಕ ಕಾಲದಿಂದ ನಿರಂತರವಾಗಿ ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡುತ್ತಿದೆ. ಗಾಜಾದ ಮೇಲೆ ನಾವು ಹಿಡಿತ ಸಾಧಿಸಿದ್ದೇವೆ ಎಂದು ಹೇಳಿದರು. ಜುಲೈ 31 ರಂದು ಟೆಹ್ರಾನ್‌ನ ಅತಿಥಿಗೃಹದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹನಿಯೆಹ್ ಕೊಲ್ಲಲ್ಪಟ್ಟಿದ್ದ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆಹ್ ಆಗಮನದ ವಾರಗಳ ಮೊದಲು ಇಸ್ರೇಲಿ ಕಾರ್ಯಕರ್ತರು ಸ್ಫೋಟಕಗಳನ್ನು ಇರಿಸಿದ್ದರು ಎಂದು ವರದಿಯಾಗಿದೆ.

ತಿಂಗಳುಗಳ ನಂತರ, ಗಾಜಾದಲ್ಲಿ ಇಸ್ರೇಲಿ ಪಡೆಗಳು ಹನಿಯೆ ಅವರ ಉತ್ತರಾಧಿಕಾರಿ ದಕ್ಷಿಣ ಗಾಜಾ ಪಟ್ಟಿಯ ಕಾರ್ಯಾಚರಣೆಯಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ನಾಯಕ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿದೆ” ಎಂದು ಇಸ್ರೇಲಿ ಮಿಲಿಟರಿ ಹೇಳಿತ್ತು. ಆತನ ಅವರ ಸಾವನ್ನು ಹಮಾಸ್ ದೃಢಪಡಿಸಿರಲಿಲ್ಲ. ನಂತರ ಈ ಬಗ್ಗೆ ಹಮಾಸ್ ಸ್ಪಷ್ಟನೆ ನೀಡಿದ್ದು, ತಮ್ಮ ನಾಯಕನ ಸಾವನ್ನು ಖಚಿತಪಡಿಸಿತ್ತು. ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸಿನ್ವಾರ್ ಎಂದು ಹೇಳಲಾಗಿತ್ತು. ಇದಾದ ನಂತರ ಇಸ್ರೇಲ್ ಮತ್ತು ಗಾಜಾ ನಡುವಿನ ಸಂಘರ್ಷ ಉಲ್ಬಣಗೊಂಡಿತು.

ಅಕ್ಟೋಬರ್ 7, 2023 ರಂದು ಹಮಾಸ್ ಮೊದಲ ಬಾರಿಗೆ ಇಸ್ರೇಲ್​ ಮೇಲೆ ದಾಳಿ ನಡೆಸಿ ಹಲವರನ್ನು ಹತ್ಯೆ ಮಾಡಿತ್ತು. ಅಷ್ಟೇ ಅಲ್ಲದೆ ಹಮಾಸ್ ಉಗ್ರರು 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಇದರಿಂದ ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್​ ಹಮಾಸ್​ ಮೇಲೆ ಪದೇ ಪದೇ ದಾಳಿ ನಡೆಸುತ್ತಲೇ ಇದೆ. ಇಸ್ರೇಲ್ ಮೂರು ವಾರಗಳವರೆಗೆ ಗಾಜಾದ ಮೇಲೆ 6000 ಬಾಂಬ್​ಗಳನ್ನು ಹಾರಿಸಿತ್ತು.

ಈ ಸುದ್ದಿಯನ್ನೂ ಓದಿ : Israel Airstrike: ಮತ್ತೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ಟಾಪ್‌ ಲೀಡರ್‌ ಉಡೀಸ್‌