ಇಸ್ಲಾಮಿಕ್ ಜಿಹಾದ್ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಯ ಮೂವರು ಹಿರಿಯ ಕಮಾಂಡರ್ಗಳು ಕೊಲ್ಲಲ್ಪಟ್ಟಿದ್ದಾರೆ. ಇನ್ನುಳಿದ 9 ಮಂದಿ ನಾಗರಿಕ ರಾಗಿದ್ದು, ಅದರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.
ಗಾಜಾ ಪಟ್ಟಿಯಲ್ಲಿ ಅಡಗಿರುವ ಹಮಾಸ್ ಉಗ್ರರು ಅಂದರೆ, ಪ್ಯಾಲೆಸ್ಟೈನ್ ಸುನ್ನಿ ಇಸ್ಲಾಂ ಮೂಲಭೂತವಾದಿಗಳನ್ನು ಸಂಪೂರ್ಣ ನಿರ್ನಾಮ ಮಾಡುವುದಾಗಿ ಇಸ್ರೇಲ್ ಈಗಾಗಲೇ ಶಪಥ ಮಾಡಿದೆ. ಹೀಗಾಗಿ ಪದೇಪದೆ ಗಾಜಾ ಪಟ್ಟಿ ಮೇಲೆ ಇಸ್ರೇಲ್ ವಿವಿಧ ಸ್ವರೂಪದ ದಾಳಿ ನಡೆಸುತ್ತಲೇ ಬರುತ್ತಿದೆ.
ಈ ಸಲ ಇಸ್ರೇಲ್ ಗಾಜಾ ಪಟ್ಟಿಯ ವಿವಿಧ ಕಡೆಗಳಲ್ಲಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ದಾಳಿ ನಡೆಸಿದ್ದವು. 12 ಜನ ಮೃತಪಡುವ ಜತೆಗೆ, ಅನೇಕರು ಗಾಯಗೊಂಡಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.