ಕರಾಚಿ: ಬಲೂಚಿಸ್ತಾನದ ಗ್ವಾದರ್ ಎಂಬಲ್ಲಿ ಬಲೂಚ್ ಬಂಡುಕೋರರು, ಪಾಕಿಸ್ತಾನ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾರ ಪುತ್ಥಳಿಯನ್ನು ಬಾಂಬ್ ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ.
ಬಂಡುಕೋರರು ಪ್ರವಾಸಿಗರ ಸೋಗಿನಲ್ಲಿ ಬಂದಿದ್ದರು. ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ. ಜಿನ್ನಾ ವಿಗ್ರಹ ನಾಶ ಪಾಕ್ ವಿಚಾರಧಾರೆಯ ಮೇಲಿನ ದಾಳಿ ಎಂದು ಬಲೂಚಿಸ್ತಾನದ ಮಾಜಿ ಗೃಹಸಚಿವ ಸರ್ಫ್ ರಾಜ್ ಘಟನೆಯನ್ನು ಖಂಡಿಸಿ ದ್ದಾರೆ.
ಸ್ಫೋಟದ ತೀವ್ರತೆಗೆ ವಿಗ್ರಹದ ಒಂದಂಶವೂ ಉಳಿದಿಲ್ಲ ಎಂದು ಸ್ಥಳೀಯ ನಗರಾಡಳಿತ ತಿಳಿಸಿದೆ. ಸ್ಫೋಟ ನಡೆದ ಕೆಲ ಹೊತ್ತಿನಲ್ಲೇ ಬಲೂಚ್ ರಿಪಬ್ಲಿಕನ್ ಆರ್ಮಿ ಸಂಘಟನೆಯ ಬಂಡುಕೋರರು ಸ್ಫೋಟದ ಹೊಣೆ ಹೊತ್ತುಕೊಂಡಿದ್ದಾರೆ.
2013ರಲ್ಲಿ ಜಿನ್ನಾ ಅವರು ತಂಗಿದ್ದರು ಎನ್ನಲಾದ 121 ವರ್ಷ ಹಳೆಯ ಕಟ್ಟಡಡವನ್ನು ಬಲೂಚ್ ಬಂಡುಕೋರರು ಬೆಂಕಿ ಮತ್ತು ಗುಂಡಿನದಾಳಿ ಯಿಂದ ಹಾನಿಯುಂಟುಮಾಡಿದ್ದರು.