ಬ್ರಿಟನ್‌ನ ವಯಸ್ಕರ ಮನರಂಜನಾ ತಾರೆಯಾದ ಲಿಲಿ ಫಿಲಿಪ್ಸ್ (Lily Phillips) ಇಪ್ಪತ್ನಾಲ್ಕು ಗಂಟೆಯಲ್ಲಿ ಸಾವಿರ ಪುರುಷರೊಂದಿಗೆ ಸೆಕ್ಸ್ ಮಾಡುವ ಮೂಲಕ ಹೊಸ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಇಪ್ಪತ್ಮೂರು ವಯಸ್ಸಿನ ಇವರು ತಮ್ಮ ಈ ಪ್ರಯತ್ನದ ಹಾದಿಯಲ್ಲಿ ಈಗಾಗಲೇ ತರಬೇತಿಯಲ್ಲಿ ನಿರತರಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಪ್ರಪಂಚದ ನಾನಾ ಕಡೆಯ ಜನರನ್ನು ಇಮೇಲ್ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸ್ವೀಕರಿಸಲಾದ ಅರ್ಜಿಗಳಲ್ಲಿ ಸಾವಿರ ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. ಜನವರಿ 2025ರಲ್ಲಿ ಆಯೋಜನೆ ಆಗಲಿರುವ ಈ ಕಾರ್ಯಕ್ರಮಕ್ಕೆ “ವರ್ಷದ ರೆಕಾರ್ಡ್ ಬ್ರೇಕಿಂಗ್ ಈವೆಂಟ್” ಎಂದೇ ಹೆಸರಿಸಲಾಗಿದೆ.
ನ್ಯೂಯಾರ್ಕ್‌ನ ವರದಿಯೊಂದರ ಪ್ರಕಾರ, ಸದ್ಯಕ್ಕೆ ವಯಸ್ಕರ ತಾರೆ ಲಿಸಾ ಸ್ಪಾರ್ಕ್ಸ್ ಅವರ ಹೆಸರಿನಲ್ಲಿ ಈ ದಾಖಲೆ ಇದೆ. ಅವರು 2024ರಲ್ಲಿ ಪೊಲೆಂಡ್‌ನಲ್ಲಿ, ಒಂದು ದಿನಕ್ಕೆ 919 ಮಂದಿಯೊಂದಿಗೆ ಸೆಕ್ಸ್ ಮಾಡಿ ದಾಖಲೆ ಮಾಡಿದ್ದರು. ಇದಾದ ಬಳಿಕ ಒಂದು ವಾರಗಳ ಕಾಲ ತುಂಬಾ ನೋವು ಅನುಭವಿಸಿದರೂ ಪಕ್ರಿಯೆಯ ಸಂದರ್ಭದಲ್ಲಿ ತಾನು ತುಂಬಾ ಎಂಜಾಯ್ ಮಾಡಿದ್ದೆ ಎಂದು ಲಿಸಾ ಹೇಳಿಕೊಂಡಿದ್ದರು.
🇬🇧 'MATTRESS ACTRESS' BEDS 101 MEN IN A DAY
— Mario Nawfal (@MarioNawfal) November 3, 2024
Lily Phillips, 23, claims to have had sex with 101 men in 14 hours, documenting the controversial experience on social media.
Despite receiving a backlash, she insists it was consensual and fueled by her passion for sex and content… pic.twitter.com/ekeJAvBQmW
ಇದೀಗ ಬ್ರಿಟಿಷ್ ವಯಸ್ಕರ ತಾರೆ ಲಿಲಿ ಫಿಲಿಪ್ಸ್ ಈ ದಾಖಲೆಯನ್ನು ಮುರಿಯುವ ಗುರಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ತಿಂಗಳುಗಳಿಂದ ಹಲವು ಜನರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಕುರಿತಂತೆ ಲಿಲಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿಯವರೆಗೆ ಯಾರಿಂದಲೂ ಸಾಧಿಸಲಾಗದಂಥ ಅನನ್ಯ ದಾಖಲೆಯನ್ನು ಸಾಧಿಸಲು ಹೊರಟ ಈ ಪ್ರಯತ್ನದ ಸುದ್ದಿ ಅಂತರ್ಜಾಲದಲ್ಲಿ ಸಾಕಷ್ಟು ಕೋಲಾಹಲವನ್ನೂ ಹುಟ್ಟುಹಾಕಿದೆ.
ಇತ್ತೀಚೆಗೆ ಬಿತ್ತರಗೊಂಡ ರಿಯಾಲಿಟಿ ಚೆಕ್ ಪೋಡ್‌ಕಾಸ್ಟ್ ಒಂದರಲ್ಲಿ ಲಿಲಿ ಪಿಲಿಪ್ಸ್ ತಾವು ಇದುವರೆಗೆ 101 ಜನರೊಂದಿಗೆ ಸೆಕ್ಸ್ ಮಾಡಿದ್ದೇನೆ. ಮುಂದಿನ ಕೆಲವು ವಾರಗಳಲ್ಲಿ 300 ಮಂದಿಯೊಂದಿಗೆ ಸೆಕ್ಸ್ ಮಾಡುವ ಗುರಿ ಸಾಧಿಸಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
“ಇದು ಒಂದು ರೀತಿಯಲ್ಲಿ ಬಾಕ್ಸಿಂಗ್ ಮ್ಯಾಚ್ ಇದ್ದ ಹಾಗೆ. ಖಂಡಿತವಾಗಿಯೂ ಕೊನೆಯವರೆಗೂ ನಾನೊಂದಿಷ್ಟು ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರೆ, ಇದನ್ನು ಸಾಧಿಸುವ ನಿಟ್ಟಿನಲ್ಲಿ ನಾನು ಬದ್ಧಳಾಗಿದ್ದೇನೆ” ಎಂದು ಲಿಲಿ ಹೇಳಿಕೊಂಡಿದ್ದಾರೆ. ಅಲ್ಲದೆ 9ರಿಂದ 5 ಗಂಟೆವರೆಗೆ ಕೆಲಸ ಮಾಡುವುದಕ್ಕಿಂತಲೂ ಹೆಚ್ಚು ಜನರೊಂದಿಗೆ ಸೆಕ್ಸ್ ಮಾಡುವುದು ಕಷ್ಟದ ಕೆಲಸ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಳಿಯಿಂದ ನಡುಗುತ್ತಿದ್ದ ಬೆಕ್ಕಿನ ಮರಿಗೆ ಚೀನಾದ ಹುಡುಗಿ ಮಾಡಿದ್ದೇನು? ವಿಡಿಯೊ ನೋಡಿ
ಈ ಘಟನೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಹೆಚ್ಚು ಜನರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಇದ್ದು ಇದರಿಂದ ಲಿಲಿ ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಇದ್ಯಾವುದರ ಬಗ್ಗೂ ತಲೆ ಕೆಡಿಸಿಕೊಳ್ಳದ ಲಿಲಿ, ಗುರಿಯನ್ನು ತಲುಪಿಯೇ ತೀರುತ್ತೇನೆ ಎಂದು ಸವಾಲು ಹಾಕಿದ್ದಾರೆ.