ಬಾರ್ಸಿಲೋನಾ: ಸ್ಪೇನ್ ದೇಶದ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್ಗೆ ತುತ್ತಾಗಿದೆ ಎಂದು ಸ್ಥಳೀಯ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಆ ಬಳಿಕ ಮೂರು ಹೆಣ್ಣು ಹಾಗೂ ಒಂದು ಗಂಡು ಸಿಂಹಕ್ಕೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಝಾಲಾ, ನೀಮಾ, ರನ್ರನ್ ಹಾಗೂ ಕಿಯಂಬೆ ಎಂಬ ಹೆಸರಿನ ಸಿಂಹಗಳಿಗೆ ಸೋಂಕು ದೃಢಪಟ್ಟಿದೆ.
ಈ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಅನ್ನೋದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಲ್ಕು ವರ್ಷದ ಗಂಡು ಸಿಂಹ ಹಾಗೂ 16 ವರ್ಷದ ಮೂವರು ಹೆಣ್ಣು ಸಿಂಹಗಳು ಮೃಗಾಲಯದ ಇತರೆ ಯಾವುದೇ ಪ್ರಾಣಿಗಳ ಜೊತೆ ಸಂಪರ್ಕವನ್ನ ಹೊಂದಿಲ್ಲ. ಸದ್ಯ ಸಿಂಹಗಳ ಸ್ಥಿತಿ ಸ್ಥಿರವಾಗಿದ್ದು, ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ಮುಂದುವರಿಸಿದ್ದಾರೆ.