Thursday, 12th December 2024

ಡೆಲ್ಟಾ ಸೋಂಕು ಪ್ರಕರಣ ಉಲ್ಬಣ: ಆಸ್ಟ್ರೇಲಿಯಾದಲ್ಲಿ ಲಾಕ್ಡೌನ್‌ ಜಾರಿ

ಸಿಡ್ನಿ: ಕೊರೋನ ವೈರಸ್ ನ ಹೊಸ ರೂಪಾಂತರಿ ವೈರಸ್ ಡೆಲ್ಟಾ ಸೋಂಕು ಪ್ರಕರಣ ಉಲ್ಬಣ ಗೊಂಡಿರುವುದರಿಂದ ಕೇಂದ್ರ ಸಿಡ್ನಿ ಮತ್ತು ಬಾಂಡಿ ಬಳಿಯ ಆಕರ್ಷಕ ಬೀಚ್ ಪ್ರದೇಶಗಳಲ್ಲಿ ಶುಕ್ರವಾರದಿಂದ ಲಾಕ್ಡೌನ್ ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ.

ಸಿಡ್ನಿ ಅಂತರಾಷ್ಟ್ರೀಯ ವಿಮಾನದ ಸಿಬ್ಬಂದಿಗಳನ್ನು ಹೋಟೆಲ್ ನ ಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದ ಕಾರು ಚಾಲಕನೊಬ್ಬನಲ್ಲಿ ಡೆಲ್ಟಾ ಸೋಂಕು ಪ್ರಕರಣ ಕಂಡುಬಂದ 15 ದಿನದೊಳಗೇ ಮತ್ತೆ 65 ಪ್ರಕರಣ ದಾಖಲಾಗಿದೆ.

ಕಾರು ಡ್ರೈವರ್ ನ ಸಂಪರ್ಕದಲ್ಲಿದ್ದ ಹಲವರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ವೈರಸ್ ಸಿಡ್ನಿ ನಗರದಲ್ಲಿ ಕ್ಷಿಪ್ರವಾಗಿ ಹರಡುತ್ತಿದೆ.