ವಾಷಿಂಗ್ಟನ್: ಅಮೆರಿಕದ ಕ್ಯಾಲಿಪೋರ್ನಿಯಾದ ಲಾಸ್ ಏಜಂಲೀಸ್ (Los Angeles Wildfire)ನಲ್ಲಿ ಕಾಡ್ಗಿಚ್ಚು ಉಂಟಾಗಿದ್ದು ಸಮೀಪದ ಮನೆಗಳು, ವಾಹನಗಳು ಸುಟ್ಟು ಭಸ್ಮವಾಗಿದೆ. ಈಗಾಗಲೇ ಯಾವುದೇ ಪ್ರಾಣ ಹಾನಿಯಾಗದೇ ಸ್ಥಳದಿಂದ ಸುಮಾರು 30 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಟಾ ಮೋನಿಕಾ ಬಳಿಯ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದಲ್ಲಿ ಸಂಪೂರ್ಣ ಬೆಂಕಿ ಆವರಿಸಿಕೊಂಡಿದ್ದು, ಗಾಳಿ ತೀವ್ರವಾಗಿ ಬೀಸುತ್ತಿರುವ ಕಾರಣ ಎಲ್ಲೆಡೆ ವ್ಯಾಪಿಸಿದೆ. ಬೆಂಕಿ ನಂದಿಸಲು 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ವಾಹನಗಳನ್ನು ನಿಯೋಜನೆ ಮಾಡಲಾಗಿದೆ. 20ಎಕರೆಯಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಗಂಟೆಗಳಲ್ಲಿ 1,200 ಎಕರೆ ಪ್ರದೇಶಕ್ಕೆ ವ್ಯಾಪಿಸಿ ಬಹಳಷ್ಟು ಹಾನಿಯಾಗಿದೆ.
I’m praying for all those in the path of wildfire in Los Angeles. May God have mercy. pic.twitter.com/l0WL4Asf4U
— Max Lucado (@MaxLucado) January 8, 2025
ಈ ಭೀಕರ ಗಾಳಿಯ ನಡುವೆ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಲಾಸ್ ಏಂಜಲೀಸ್ ಅಗ್ನಿಶಾಮಕ ಮುಖ್ಯಸ್ಥ ಕ್ರಿಸ್ಟಿನ್ ಕ್ರೌಲಿ ಈಗಾಗಲೇ 30,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. 13,000ಕ್ಕೂ ಹೆಚ್ಚು ಕಟ್ಟಡಗಳು ಮತ್ತು 10,000 ಮನೆಗಳು ಅಪಾಯದಲ್ಲಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಾಣ ಅಪಾಯ ಆಗಿಲ್ಲ ಎಂದಿದ್ದಾರೆ.
ಪರ್ವತ ಮತ್ತು ಬೆಟ್ಟ ಗುಡ್ಡಗಳಿಂದ ಗಂಟೆಗೆ 160 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರಲಿದ್ದು ಕಾಡ್ಗಿಚ್ಚು ಇನ್ನೂ ಭಯಾನಕವಾಗಿ ವ್ಯಾಪಿಸುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ರಾಜ್ಯಪಾಲ ಗೆವಿನ್ ನ್ಯೂಸೊಮ್ ಅವರು ಲಾಸ್ ಏಜಂಲೀಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.