ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದ ಪೆಸಿಫಿಕ್ ಪ್ಯಾಲಿಸೈಡ್ಸ್ (Palisades) ಹಾಗೂ ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಲ್ಲಿ (Los Angeles Wildfire) ಈವರೆಗೆ 16 ಮಂದಿ ಮೃತಪಟ್ಟಿದ್ದು, 13 ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾಡ್ಗಿಚ್ಚಿನಲ್ಲಿ 1,500ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಅರಣ್ಯ ಸಮೀಪದ 70 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮೃತಪಟ್ಟವರಲ್ಲಿ ಮಾಜಿ ಆಸ್ಟ್ರೇಲಿಯನ್ ಬಾಲನಟ ರೋರಿ ಸೈಕ್ಸ್ ಕೂಡ ಒಬ್ಬರು ಎಂದು ತಿಳಿದು ಬಂದಿದೆ. ಅವರು 1990 ರ ದಶಕದಲ್ಲಿ ಬ್ರಿಟಿಷ್ ಟಿವಿ ಶೋ “ಕಿಡ್ಡಿ ಕಪರ್ಸ್” ನಲ್ಲಿ ಕಾಣಿಸಿಕೊಂಡಿದ್ದರು.ಪ್ಯಾಲಿಸೈಡ್ಸ್ ನ ಹಾಲಿವುಡ್ ಹಿಲ್ಸ್ ಗೆ ಬೆಂಕಿ ಹೊತ್ತಿಕೊಂಡ ಕಾರಣ ಅನೇಕ ಹಾಲಿವುಡ್ ನಟ (Hollywood Celebs) ನಟಿಯರ ಮನೆಗಳು ಸುಟ್ಟು ಭಸ್ಮವಾಗಿದೆ. ಪಾಲಿಸೇಡ್ಸ್ ಕಾಳ್ಗಿಚ್ಚು ಪೂರ್ವಕ್ಕೆ ಹರಡುವುದನ್ನು ತಡೆಯಲು ವಿಮಾನವು ಶನಿವಾರ ಕಡಿದಾದ ಬೆಟ್ಟಗಳ ಮೇಲೆ ನೀರನ್ನು ಹಾಯಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ, ಪಾಲಿಸೇಡ್ಸ್ ಬೆಂಕಿಯು ಹೆಚ್ಚುವರಿ 1,000 ಎಕರೆಗಳಲ್ಲಿ ವ್ಯಾಪಿಸಿದೆ ಹಾಗೂ ಇನ್ನಷ್ಟು ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹವಾಮಾನ ಸೇವೆಯು ಸಾಂಟಾ ಅನಾ ಮಾರುತಗಳು ಹದಗೆಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದು, ಲಾಸ್ ಏಂಜಲೀಸ್ ಮತ್ತು ವೆಂಚುರಾ ಕೌಂಟಿಗಳಲ್ಲಿ ಶನಿವಾರ ರಾತ್ರಿಯಿಂದ ಮಂಗಳಾವಾರ ಬೆಳಿಗ್ಗೆವರೆಗೆ 30- 70 mph ವರೆಗೆ ಗಾಳಿ ಬೀಸಬಹುದು ಎಂದು ತಿಳಿಸಿದೆ.
ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಪತ್ತು ಘೋಷಣೆಗೆ ಸಹಿ ಹಾಕಿದ್ದಾರೆ. ಕಾಡ್ಗಿಚ್ಚಿನಿಂದ ಆಶ್ರಯ ಕಳೆದುಕೊಂಡವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಏತನ್ಮಧ್ಯೆ, ಕ್ಯಾಲಿಫೋರ್ನಿಯಾ ಗವರ್ನರ್ ನ್ಯೂಸಮ್, ಮೆಕ್ಸಿಕೋದಿಂದ ಅಗ್ನಿಶಾಮಕ ದಳದವರು ಲಾಸ್ ಏಂಜಲೀಸ್ಗೆ ಆಗಮಿಸಿ ಈಗಾಗಲೇ ಪಾಲಿಸೇಡ್ಸ್ನಲ್ಲಿ ಬೆಂಕಿ ನಂದಿಸುತ್ತಿರುವುದಾಗಿ ತಿಳಿಸಿದ್ದಾರೆ.
Firefighters from Mexico just arrived at LAX. They'll be joining 14,000+ personnel already battling the #PalisadesFire.
— Governor Newsom (@CAgovernor) January 11, 2025
California is immensely grateful to our neighbors' support in the fight against the wildfires in Los Angeles. pic.twitter.com/qchedlXYK1
ಸದ್ಯ ಕಾಡ್ಗಿಚ್ಚಿಗೆ ಪ್ರಮುಖ ಕಾರಣವೇನು ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ : Los Angeles Wildfire: ಲಾಸ್ ಏಂಜಲೀಸ್ನಲ್ಲಿ ಕಾಡ್ಗಿಚ್ಚು; ಹಾಲಿವುಡ್ ಸೆಲೆಬ್ರಿಟಿಗಳ ಮನೆಗಳು ಬೆಂಕಿಗಾಹುತಿ