Thursday, 19th September 2024

ಆಫ್ಘಾನ್‌ ಹೊಸ ಸರಕಾರಕ್ಕೆ ಮುಲ್ಲಾಬರದಾರ್ ಮುಂದಾಳತ್ವ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಮುಲ್ಲಾ ಬರದಾರ್ ಆಫ್ಘಾನಿಸ್ತಾನದ ಹೊಸ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಲಿಬಾನ್ ಸ್ಥಾಪಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ಮತ್ತು ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರಿಗೆ ಸರ್ಕಾರ ದಲ್ಲಿ ಹಿರಿಯ ಹುದ್ದೆಗಳನ್ನು ನೀಡಲಾಗುತ್ತಿದೆ ಎನ್ನಲಾಗಿದ್ದು, ಇದಕ್ಕೂ ಮುನ್ನ ತಾಲಿಬಾನ್ ನ ಸಾಂಸ್ಕೃತಿಕ ಆಯೋಗದ ಅನಾಮುಲ್ಲಾ ಸಮಾಂಗನಿ ಅವರು ಅಖುಂದ್ಜಾದಾ ಅವರು ಸರ್ಕಾರದ ನಾಯಕರಾಗಲಿದ್ದಾರೆ ಎಂದು ಹೇಳಿದ್ದರು.

ಹೊಸ ಸರ್ಕಾರದ ಬಗ್ಗೆ ಸಮಾಲೋಚನೆಗಳನ್ನು ಅಂತಿಮಗೊಳಿಸಲಾಗಿದ್ದು, ಸಚಿವ ಸಂಪುಟದ ಬಗ್ಗೆಯೂ ಅಗತ್ಯ ಚರ್ಚೆಗಳು ನಡೆದಿವೆ. ಸರ್ಕಾರದಲ್ಲಿ ನಂಬಿಗಸ್ತರ ಕಮಾಂಡರ್ (ಅಖುಂಜಾಡಾ) ಇರುವಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ಸರ್ಕಾರದ ನಾಯಕರಾಗಲಿದ್ದಾರೆ’ ಎಂದು ಸಮಂಗನಿ ನಿನ್ನೆ ಹೇಳಿದ್ದರು.

Leave a Reply

Your email address will not be published. Required fields are marked *