Friday, 22nd November 2024

ನ್ಯೂಜಿಲೆಂಡ್‌: ಕೆರ್ಮಾಡೆಕ್ ದ್ವೀಪದಲ್ಲಿ ಎರಡೆರಡು ಭೂಕಂಪ

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಟರ್ಕಿಯಲ್ಲಿ ಭಾರಿ ಪ್ರಮಾಣದ ಭೂಕಂಪನ ಉಂಟಾಗಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ನ್ಯೂಜಿಲೆಂಡ್​ನ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್​ ದ್ವೀಪ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪ ವರದಿಯಾಗಿದೆ.

ನ್ಯೂಜಿಲೆಂಡ್​ನಲ್ಲಿ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.2 ಎಂದು ಅಳೆಯಲಾಗಿದೆ.

20 ನಿಮಿಷಗಳ ನಂತರ, ಕೆರ್ಮಾಡೆಕ್ ದ್ವೀಪದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.4 ಎಂದು ಅಳೆಯಲಾಗಿದೆ.

ಕೆರ್ಮಾಡೆಕ್​​ ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು ಸುಮಾರು 10 ಕಿ.ಮೀ ಆಳ ದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಭೂಕಂಪನದಿಂದ ನ್ಯೂಜಿಲೆಂಡ್‌ಗೆ ಯಾವುದೇ ಸುನಾಮಿ ಭಯವಿಲ್ಲ.