Thursday, 12th December 2024

ನ್ಯೂಜಿಲೆಂಡ್: ದಕ್ಷಿಣ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ

ನ್ಯೂಜಿಲೆಂಡ್: ದಕ್ಷಿಣ ಕರಾವಳಿಯಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪದ ಕೇಂದ್ರವು ಭೂಮಿಯ ಮೇಲ್ಮೈಯಿಂದ 33 ಕಿಲೋಮೀಟರ್ (21 ಮೈಲಿ) ಕೆಳಗೆ ಇತ್ತು. ಆದಾಗ್ಯೂ, ತಕ್ಷಣಕ್ಕೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಮತ್ತು ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ಭೂಕಂಪದ ಅನುಭವವಾದ ನಂತರ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಭೂಕಂಪ ವಲಯಕ್ಕೆ ಹತ್ತಿರವಿರುವ ಅತಿದೊಡ್ಡ ನಗರ ವಾದ ಇನ್ವರ್ಕಾರ್ಗಿಲ್ ಸಿಟಿ ಕೌನ್ಸಿಲ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.