ಅಬುಜಾ (ನೈಜೀರಿಯಾ): ನೈಜೀರಿಯಾದ ನೈಗರ್ ನದಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದೋಣಿ ಮಗುಚಿ ಬಿದ್ದು ನೂರಕ್ಕೂ ಅಧಿಕ ಜನರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಕ್ವಾರಾ ರಾಜ್ಯದ ಪಾಟಿಗಿ ಜಿಲ್ಲೆಯ ಕ್ಪಾಡಾ ಎಂಬಲ್ಲಿ ಈ ದುರಂತ ಸಂಭವಿಸಿದೆ. ಕ್ಪಾಡಾದಲ್ಲಿ ಮದುವೆ ಕಾರ್ಯ ಕ್ರಮ ನಡೆಯುತ್ತಿತ್ತು. ಅತಿಯಾದ ಮಳೆ ಸುರಿದ ಕಾರಣ ರಸ್ತೆ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಅಲ್ಲಿಗೆ ತಲುಪಲು ಜನರು ವಾಹನಗಳ ಬದಲಾಗಿ, ದೋಣಿಯನ್ನು ಆಯ್ದುಕೊಂಡಿದ್ದಾರೆ. ಎಗ್ಬೋಟಿ ಎಂಬ ಗ್ರಾಮದಿಂದ ದೋಣಿಯಲ್ಲಿ ಸಾಗುತ್ತಿದ್ದಾಗ ಕ್ವಾಡಾ ಸಮೀಪ ನೈಗರ್ ನದಿ ನೀರಿನಲ್ಲಿ ತೇಲಿಕೊಂಡು ಬಂದ ದೊಡ್ಡ ಮರದ ದಿಂಬಿಗೆ ದೋಣಿ ಡಿಕ್ಕಿಯಾಗಿದೆ. ನದಿಯಲ್ಲಿ ದೋಣಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ದೊಡ್ಡ ಮರದ ಕಾಂಡಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಮಗುಚಿ ನೂರಕ್ಕೂ ಅಧಿಕ ಜನರು ನದಿ ಪಾಲಾಗಿದ್ದಾರೆ.
ಬೋಟ್ನಲ್ಲಿ 300 ಜನರು ಇದ್ದರು. ಹಲವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 100 ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಅವರೆಲ್ಲರೂ ಸಾವನ್ನಪ್ಪಿರುವ ಶಂಕೆ ಇದೆ. ಉಳಿದವರು ಹಾಗೋ ಹೀಗೋ ಈಜಿ ದಡ ಸೇರಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.
“ಕ್ವಾಡಾ ಹಳ್ಳಿಯಲ್ಲಿ ಮದುವೆ ಸಮಾರಂಭವಿತ್ತು. ಮಳೆ ಸುರಿದ ಕಾರಣ ರಸ್ತೆ ಸಂಪರ್ಕ ಇಲ್ಲವಾಗಿತ್ತು. ಆದ್ದರಿಂದ ದ್ವಿಚಕ್ರವಾಹನದೊಂದಿಗೆ ಬಂದವ ರಿಗೆ ಸವಾರಿ ಮಾಡಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಮುಗಿದರೂ ಮಳೆ ನಿಲ್ಲದ ಕಾರಣ ಜನರನ್ನು ಸಾಗಿಸಲು ದೋಣಿಯನ್ನು ಬಳಸಲಾಯಿತು. ಆದರೆ, ನೈಗರ್ ನದಿಯಲ್ಲಿ ದೋಣಿ ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಪ್ರಾಣ ಪಕ್ಷಿಗಳು ಹಾರಿ ಹೋಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.