Monday, 25th November 2024

ಮಾ.26ರಿಂದ ಹವಾಯಿ ರಾಜ್ಯಾದ್ಯಂತ ಮಾಸ್ಕ್’ಗೆ ಗುಡ್ ಬೈ

ಹೊನಲುಲು: ಮಾ.26ರೊಳಗೆ ಅಮೆರಿಕದ ಹವಾಯಿ ರಾಜ್ಯಾದ್ಯಂತ ಮಾ.26ರಿಂದ ಮನೆಯೊಳಗೆ ಮಾಸ್ಕ್ ಹಾಕುವುದಕ್ಕೆ ಗುಡ್ ಬೈ ಹೇಳಲು ನಿರ್ಧರಿಸಲಾಗಿದೆ ಎಂದು ಹವಾಯಿ ಗೌರ್ನರ್ ಘೋಷಿಸಿದ್ದಾರೆ.

ಮಾ.25ರ ರಾತ್ರಿ 11.59ರ ನಂತರ ರಾಜ್ಯದ ಯಾವುದೇ ಮನೆಯೊಳಗೆ ಮಾಸ್ಕ್‌ಗಳ ಅಗತ್ಯ ವಿರುವುದಿಲ್ಲ ಎಂದು ಹೇಳಿದ್ದಾರೆ.

ಬೇಸಿಗೆಯ ನಂತರ ಈ ಸಂಖ್ಯೆ 50ಕ್ಕಿಂತ ಕಡಿಮೆ ಇರುವುದು ಇದೇ ಮೊದಲು. ಪ್ರಕರಣ ಗಳು ಇಳಿಮುಖವಾಗುತ್ತಿರುವುದು ಮುಂದುವರೆದಿದೆ. ಏಪ್ರಿಲ್ 2020ರಿಂದ ಹವಾಯಿ ರಾಜ್ಯಕ್ಕೆ ಫೇಸ್ ಮಾಸ್ಕ್ ಅಗತ್ಯವಿತ್ತು.

ಮಾ.25ರಂದು ದ್ವೀಪಗಳಿಗೆ ಆಗಮಿಸುವ ಪ್ರಯಾಣಿಕರು ಇನ್ನು ಮುಂದೆ ಲಸಿಕೆಯ ಪ್ರಮಾಣ ಪತ್ರ ಅಥವಾ ಕ್ವಾರಂಟೈನ್ ತಪ್ಪಿಸಲು ಕೋವಿಡ್ ವರದಿ ತೋರಿಸಬೇಕಾಗಿ ಹವಾಯಿ ರಾಜ್ಯದಲ್ಲಿ ಸಡಿಲಗೊಳಿಸಲಾಗಿದೆ ಎಂದಿದ್ದಾರೆ.

ಕಿರಾಣಿ ಅಂಗಡಿಯಲ್ಲಿರುವಾಗ ಮಾಸ್ಕ್ ಕಡ್ಡಾಯವಲ್ಲದಿದ್ದರೂ ಸಹ ನಾವು ಮಾಸ್ಕ್ ಧರಿಸುವುದನ್ನು ಮುಂದುವರೆಸುವುದಾಗಿ ಹವಾಯಿ ನಿವಾಸಿಯೊಬ್ಬರು ಹೇಳಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲು ನಾವು ಮಾಸ್ಕ್ ಧಾರಣೆಯನ್ನು ಮುಂದುವರೆಸು ತ್ತೇವೆ ಎಂದು ತಿಳಿಸಿದ್ದಾರೆ.