Saturday, 23rd November 2024

ಕೊಲಂಬೊದಲ್ಲಿ ನೀರು ಸರಬರಾಜು 10 ಗಂಟೆ ಸ್ಥಗಿತ

ಕೋಲಂಬೋ : ಶ್ರೀಲಂಕಾದ ರಾಷ್ಟ್ರೀಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೊಲಂಬೊದ ಹಲವು ಭಾಗಗಳಲ್ಲಿ 10 ಗಂಟೆಗಳ ಕಾಲ ನೀರಿನ ಸರಬರಾಜನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ನೀರಿನ ಕಡಿತ ರಾತ್ರಿ 10.00 ರಿಂದ ಭಾನುವಾರ ಬೆಳಿಗ್ಗೆ 8ರವರೆಗೆ ನೀರಿನ ಸರಬರಾಜು ಸ್ಥಗಿತಗೊಳ್ಳಲಿದೆ. ನಗರದ ಎರಡು ಪ್ರದೇಶಗಳಲ್ಲಿ ನೀರು ಸರಬರಾಜು ಸಂಪೂರ್ಣ ಬಂದ್ ಆಗಲಿದ್ದು, ಎರಡು ಪ್ರದೇಶಗಳಲ್ಲಿ ಕಡಿಮೆ ಒತ್ತಡದ ನೀರು ಪೂರೈಕೆಯಾಗಲಿದೆ ಎಂದು ಮಂಡಳಿ ತಿಳಿಸಿದೆ.

ಪ್ರಸ್ತುತ ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿದ್ದು, ಇದು ಇಂಧನ, ವಿದ್ಯುತ್ ಮತ್ತು ಅನಿಲದ ಕೊರತೆಗೆ ಕಾರಣವಾಗಿದೆ. ಆರ್ಥಿಕ ಸಹಾಯಕ್ಕಾಗಿ ಸ್ನೇಹಪರ ರಾಷ್ಟ್ರಗಳ ಸಹಾಯ ಕೋರಿದೆ.

ಪ್ರತಿದಿನ ಕನಿಷ್ಠ 10 ಗಂಟೆಗಳ ಕಾಲ ವಿದ್ಯುತ್ ಕಡಿತವಾಗುತ್ತಿದೆ. ಮಾರ್ಚ್ 8 ರಿಂದ ಶ್ರೀಲಂಕಾದ ಕರೆನ್ಸಿಯು US ಡಾಲರ್ ವಿರುದ್ಧ ಸುಮಾರು SLR 90 ರಷ್ಟು ಅಪಮೌಲ್ಯಗೊಂಡಿದೆ ಎನ್ನಲಾಗುತ್ತಿದೆ.