ಪ್ಯಾರಿಸ್: ಫ್ರಾನ್ಸ್ ನಲ್ಲಿ ಕಳೆದ ಮೂರು ದಿನಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 1,04,611 ಜನ ಕರೋನಾ ಪಾಸಿಟಿವ್ ಆಗಿದ್ದಾರೆ.
ಫ್ರಾನ್ಸ್ ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಸರ್ಕಾರದ ಪ್ರಮುಖ ಸದಸ್ಯರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪರಿಸ್ಥಿತಿ ನಿಭಾ ಯಿಸಲು ತೆಗೆದುಕೊಳ್ಳಬಹುದಾದ ಕೋವಿಡ್ ಸುರಕ್ಷತಾ ಕ್ರಮಗಳನ್ನು ಚರ್ಚಿಸಿದ್ದಾರೆ.
ಸಂಪೂರ್ಣ ವ್ಯಾಕ್ಸಿನೇಷನ್ ಆದ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಬೇಕೆಂಬ ಆದೇಶ ಹೊರಡಿಸಿರುವ ಫ್ರಾನ್ಸ್ ಸರ್ಕಾರ, ಬೂಸ್ಟರ್ ಡೋಸ್ ಪಡೆಯದವರ ಆರೋಗ್ಯ ಪಾಸ್ ಅಮಾನ್ಯ ಮಾಡುವ ಎಚ್ಚರಿಕೆ ನೀಡಿದೆ.
ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕಾಗಿ, ಹಾಗೆಯೇ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಪಾಸ್ ಅಗತ್ಯವಿದೆ ಎಂಬು ವುದನ್ನ ಗಮನಿಸಬೇಕು. ಸರ್ಕಾರ ಮಾತ್ರವಲ್ಲ, ಕಳೆದ ತಿಂಗಳ ಕೊನೆಯಲ್ಲಿ, ಸವೊಯಿಯ ಅಧಿಕಾರಿಗಳು ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ವಲ್ಲದೆ ಹೊರಾಂಗಣದಲ್ಲಿಯೂ ಕಡ್ಡಾಯವಾಗಿ ಮುಖವಾಡಗಳನ್ನು ಧರಿಸುವುದನ್ನು ಮರುಪರಿಚಯಿಸಿದರು.
ಸ್ಥಿರವಾಗಿ ಏರಿಕೆಯಾಗ್ತಿದ್ದ ಪ್ರಕರಣಗಳು ಡಿ.4ರಂದು 50,000 ಗಡಿ ದಾಟಿತು. ಫ್ರಾನ್ಸ್ ನಲ್ಲಿ 122,546 ಸಾವು ಉಂಟಾಗಿದೆ.