Thursday, 12th December 2024

ಕೊರೋನಾಗೆ ನಲುಗಿದ ಫ್ರಾನ್ಸ್: ಒಂದು ತಿಂಗಳು ಲಾಕ್ ಡೌನ್

ಪ್ಯಾರಿಸ್: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿಗೆ ನಲುಗಿದ ಫ್ರಾನ್ಸ್ ಮೂರನೇ ಅಲೆಯನ್ನು ನಿಯಂತ್ರಿಸುವು ದಕ್ಕೆ ದೇಶದ ಪ್ರಮುಖ 16 ಪ್ರದೇಶಗಳಲ್ಲಿ ಒಂದು ತಿಂಗಳು ಲಾಕ್ ಡೌನ್ ಘೋಷಿಸಿದೆ.

ಶುಕ್ರವಾರ ಮಧ್ಯರಾತ್ರಿಯಿಂದ ಫ್ರ್ಯಾನ್ಸ್ 16 ಪ್ರದೇಶಗಳಲ್ಲಿ ಹೊಸ ಲಾಕ್ ಡೌನ್ ನಿಯಮಗಳು ಜಾರಿಗೆ ಬರಲಿವೆ. ಒಂದು ತಿಂಗಳವರೆಗೂ ಲಾಕ್ ಡೌನ್ ನಿಯಮ ಗಳು ಜಾರಿಯಲ್ಲಿರಲಿವೆ ಎಂದು ಪ್ರಧಾನಿ ಜೀನ್ ಕಾಸ್ಟೆಕ್ಸ್ ತಿಳಿಸಿದ್ದಾರೆ.

ಕಳೆದ 2020ರ ಮಾರ್ಚ್ ಮತ್ತು ನವೆಂಬರ್ ತಿಂಗಳಿನಲ್ಲಿ ಜಾರಿಗೊಳಿಸಿದ ಲಾಕ್ ಡೌನ್ ಹೋಲಿಸಿದರೆ ಈ ಬಾರಿ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲಾಗಿದೆ.

ಸ್ನೇಹಿತರ ಮನೆಗಳಲ್ಲಿ ಸೇರುವುದು. ಪಾರ್ಟಿ ಮಾಡುವುದು, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದೇ ಇರುವುದನ್ನು ನಿರ್ಬಂಧಿಸಲಾಗಿದೆ.

ಹೊಸ ಮಾರ್ಗಸೂಚಿಯಲ್ಲಿ….

ಜನರಿಗೆ ಮನೆಗಳಿಂದಲೇ ಕಾರ್ಯ ನಿರ್ವಹಿಸುವುದಕ್ಕೆ ಹೆಚ್ಚು ಪ್ರೋತ್ಸಾಹಿಸಲಾಗುತ್ತದೆ.

ಹೊರಭಾಗದಲ್ಲಿ ವಾಕಿಂಗ್ ಹೋಗುವವರಿಗೆ ಮಾತ್ರ ಅವಕಾಶ, ಅದಕ್ಕೆ ಸರ್ಕಾರದಿಂದ ಮೊದಲೇ ಅನುಮೋದನೆ ಪ್ರಮಾಣಪತ್ರ ಹೊಂದಿರಬೇಕು.

ಮನೆಯಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲೇ ಸಂಚರಿಸುವುದಕ್ಕೆ ಅವಕಾಶ ನೀಡಲಾಗಿದೆ.

ರಾತ್ರಿ ನಿಷೇಧಾಜ್ಞೆಯನ್ನು ಸಂಜೆ 7 ಗಂಟೆಯಿಂದ ಆರಂಭಿಸುವುದಾಗಿ ಘೋಷಿಸಲಾಗಿದೆ.

ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆಯಲು ಅನುಮತಿ

ಪುಸ್ತಕ ಮಳಿಗೆ ಮತ್ತು ಮ್ಯೂಸಿಕ್ ಶಾಪ್ ಸೇರಿದಂತೆ ಮೂಲಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily