Sunday, 15th December 2024

ಪಾಕಿಸ್ತಾನ ಸರ್ಕಾರದ ಟ್ವಿಟರ್ ಭಾರತದಲ್ಲಿ ನಿಷೇಧ

ಸ್ಯಾನ್ ಫ್ರಾನ್ಸಿಸ್ಕೋ: ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಮಾಹಿತಿಯ ಪ್ರಕಾರ, ಭಾರತ ಸರ್ಕಾರದ ಕಾನೂನು ಬೇಡಿಕೆಯ ಮೇರೆಗೆ ಟ್ವಿಟರ್ ಪಾಕಿಸ್ತಾನ ಸರ್ಕಾರದ ಖಾತೆಯ ಮೇಲೆ ಕ್ರಮ ಕೈಗೊಂಡಿದೆ.

ಪಾಕಿಸ್ತಾನ ಸರ್ಕಾರದ ಟ್ವಿಟರ್ ಹ್ಯಾಂಡಲ್ @GovtofPakistan ಆಗಿದೆ. ಈಗ ಈ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸ ಲಾಗಿದೆ.

ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಈ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ಹಲವು ಬಾರಿ ಬ್ಯಾನ್ ಮಾಡಲಾಗಿದೆ.

ಯಾವುದೇ ದೇಶದ ನ್ಯಾಯಾಲಯವು ಹೊರಡಿಸಿದ ಆದೇಶದ ಮೇಲೆ ಅಥವಾ ಸೂಕ್ತವಾದ ಕಾನೂನು ಬೇಡಿಕೆಯ ಮೇರೆಗೆ ಎಲ್ಲಾ ರೀತಿಯ ಖಾತೆಗಳನ್ನು ನಿಷೇಧಿಸಲು Twitter ಬದ್ಧವಾಗಿದೆ. ಈಗ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿದ ಯಾವುದೇ ಪೋಸ್ಟ್ ಭಾರತದಲ್ಲಿ ಗೋಚರಿಸುವುದಿಲ್ಲ.